Tuesday, October 21, 2014

ದೀಪಾವಳಿ

ಮನೆಯಲ್ಲಿ ಬೆಳಗುವ 
ದೀಪಗಳಿಂದ 
ಒಂದು ದೀಪವನ್ನು 
ಆ ಕತ್ತಲ ಮನೆಗೆ 
ಸಾಗಿಸಿರಿ 
---
ಹಬ್ಬದ ತಿಂಡಿ ತಿನಿಸು 
ಭಕ್ಷಗಳಿಂದ
ಒಂದು ತುತ್ತು 
ಯಾವುದೇ ಅನಾಥ
ಹಸಿದ ಹೊಟ್ಟೆಗೆ 
ಸೇರಲಿ 
---
ಅತಿ ಹೆಚ್ಚು ಪಟಾಕಿಯ 
ಮೋಜು
ನಿಮ್ಮ 
ಜೀವನದ ಖುಷಿಯನ್ನು
ಕಸಿದುಕೊಳ್ಳದಿರಲಿ
ಜಾಗೃತೆ 
---
ಮಹಾಲಕ್ಷ್ಮಿಯ ಕೃಪೆಯಿಂದ 
ನಿಮ್ಮ ಸಂಪತ್ತು ಏರಲಿ 
ಆದರೆ 
ದಾನ ಧರ್ಮದ
ಕರ್ತವ್ಯ 
ಮರೆಯದಿರಿ 
---
ಮಿತ್ರ ಸಂಬಂಧಿಕರಲ್ಲಿ 
ಮಿಠಾಯಿ 
ಹಂಚಿಕೊಂಡು 
ಬಂಧು ಭಾವದ
ಆನಂದವನ್ನು 
ಕಾಪಾಡಿಕೊಳ್ಳಿ

by ಹರೀಶ್ ಶೆಟ್ಟಿ, ಶಿರ್ವ

Wednesday, October 15, 2014

ಅಪರಿಣತ

ತುಸು ದೂರ ಬಂದು ಬಿಟ್ಟೆ
ಹಿಂತಿರುಗಿ ನೋಡಿದಾಗ
ಹಿಂದೆ ಯಾರೂ ಇರಲಿಲ್ಲ
---
ನಾನು ನಡೆದದ್ದೇ ದಾರಿ ಎನಿಸಿದ್ದೆ
ಸಾಗುತ್ತಲೇ ಹೋದೆ
ತಾಣ ಸಿಗದೇ ಚಡಪಡಿಸಿದೆ
---
ಹೃದಯ ಅಷ್ಟೇನೂ ದೃಡವಾಗಿರಲಿಲ್ಲ
ನಿರಾಸೆ ಬೇಗನೆ ಮೂಡಿತು
ಸೋತೆ
---
ಕಲಿಯುವ ಹಂಬಲ ಇತ್ತು
ಆದರೆ ಕಲಿತವರು/ಕಲಿಸುವವರು ನಿನಗೆ ನೀನೆ ಗುರು ಎಂದರು
ನನ್ನಿಂದ ದೂರವಾದರು
---
ಪ್ರಯತ್ನಿಸಿದೆ ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯಲು
ಆದರೆ ತುಂಬಾ ತಡವಾಯಿತು
ವ್ಯತ್ಯಾಸ ತಿಳಿಯಲು ಅಸಮರ್ಥನಾದೆ
---
ಮೌನದಿಂದ ಸ್ನೇಹ ಬೆಳೆಸಿದೆ
ಮಿತ್ರರೆಲ್ಲರು ಚಿಂತಿಸಿದರು
ನನ್ನನ್ನು ಗುರು ಎನ್ನುವವರೂ ನನ್ನ ಬಾಗಿಲಿಗೆ ಇಣುಕಿ ನೋಡುತ್ತಿದ್ದರು
by ಹರೀಶ್ ಶೆಟ್ಟಿ, ಶಿರ್ವ

Monday, October 13, 2014

ಓ ಲೇಖನಿಯೆ

ಓ ಲೇಖನಿಯೆ
ನೀನೇಕೆ ಮುನಿಸಿಕೊಂಡಿರುವೆ
ಭಾವನೆಗಳ ಬರವೆನಿಲ್ಲ ಈ ಹೃದಯದಲಿ
ಆದರೆ ಯಾಕೋ
ಕಾಗದದ ಈ ಖಾಲಿ ಹಾಳೆ
ಹೊಸ ಕಥೆ ಬಯಸುವುದಿಲ್ಲ
ಅದು ಕೇವಲ ಹಿಂದಿನ
ಅದೆಷ್ಟೋ ಕಥೆಗಳ
ನೆನಪು ಹುಟ್ಟಿಸುತ್ತಿದೆ
ನನ್ನ ಮೌನದಿಂದ
ನಿನಗೆ ಕೋಪ ಬರುವುದು ಸ್ವಾಭಾವಿಕ
ದಿನ ನಿತ್ಯ ನಿನ್ನಿಂದ ಆಟವಾಡುತ್ತಿದ್ದ ನಾನು
ಅದೆಷ್ಟೋ ದಿನದಿಂದ ನಿನ್ನ
ಸನಿಹವೂ ಬರಲಿಲ್ಲ ಅಂದರೆ
ನಿನಗೆ ಚಿಂತೆಯಾಗುವುದು ಸಹಜವಲ್ಲವೇ
ಆದರೆ
ಸ್ವಲ್ಪ ಸಮಯ ಕಳೆಯಲಿ
ಶಾಂತವಾಗಲಿ ಮನಸ್ಸು
ನಿರ್ಮಲವಾಗಲಿ ಮನಸ್ಸು
ಹುಟ್ಟಲಿ ನವೀನ ವಿಚಾರ
ನಂತರ
ವಸ್ತು ಕಥೆಯಾಗಲಿ
ಘಟನೆ ಕವನವಾಗಲಿ
ನಿನ್ನ ಮೊಗದಿಂದ
ನಗುವಿನ ಶಾಯಿ ಹರಿಯಲಿ
ಕಾಗದದ ಹಾಳೆ ಪುನಃ ಅಲಂಕೃತವಾಗಲಿ

by ಹರೀಶ್ ಶೆಟ್ಟಿ, ಶಿರ್ವ 

Thursday, October 2, 2014

ವಿರೋಧ

ಇರಬೇಕು
ವಿರೋಧ
ಆವಾಗಲೇ
ತಿಳಿಯುತ್ತದೆ
ಮೌಲ್ಯ 
ಕಾರ್ಯದ
by ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...