Tuesday, October 21, 2014

ದೀಪಾವಳಿ

ಮನೆಯಲ್ಲಿ ಬೆಳಗುವ 
ದೀಪಗಳಿಂದ 
ಒಂದು ದೀಪವನ್ನು 
ಆ ಕತ್ತಲ ಮನೆಗೆ 
ಸಾಗಿಸಿರಿ 
---
ಹಬ್ಬದ ತಿಂಡಿ ತಿನಿಸು 
ಭಕ್ಷಗಳಿಂದ
ಒಂದು ತುತ್ತು 
ಯಾವುದೇ ಅನಾಥ
ಹಸಿದ ಹೊಟ್ಟೆಗೆ 
ಸೇರಲಿ 
---
ಅತಿ ಹೆಚ್ಚು ಪಟಾಕಿಯ 
ಮೋಜು
ನಿಮ್ಮ 
ಜೀವನದ ಖುಷಿಯನ್ನು
ಕಸಿದುಕೊಳ್ಳದಿರಲಿ
ಜಾಗೃತೆ 
---
ಮಹಾಲಕ್ಷ್ಮಿಯ ಕೃಪೆಯಿಂದ 
ನಿಮ್ಮ ಸಂಪತ್ತು ಏರಲಿ 
ಆದರೆ 
ದಾನ ಧರ್ಮದ
ಕರ್ತವ್ಯ 
ಮರೆಯದಿರಿ 
---
ಮಿತ್ರ ಸಂಬಂಧಿಕರಲ್ಲಿ 
ಮಿಠಾಯಿ 
ಹಂಚಿಕೊಂಡು 
ಬಂಧು ಭಾವದ
ಆನಂದವನ್ನು 
ಕಾಪಾಡಿಕೊಳ್ಳಿ

by ಹರೀಶ್ ಶೆಟ್ಟಿ, ಶಿರ್ವ

3 comments:

  1. ತಮಗೂ ತಮ್ಮ ಬ್ಲಾಗಿಗೂ ದೀಪಾವಳಿ ಶುಭಾಷಯಗಳು...

    ಸಮಾಜಮುಖಿಯಾಗಿ ದೀಪಾವಿಳಿಯನ್ನು ಹೇಗೆ ಅರ್ಥಪೂರ್ಣವಾಗಿ ಆಚರಿಸಬಹುದೆಂದು ಸವಿವರವಾಗಿ ತಿಳಿಸಿದ್ದೀರ. ಒಳ್ಳೆಯ ಕಿವಿ ಮಾತಿನಂತಹ ಕವನ.

    shared at:
    https://www.facebook.com/groups/191375717613653?view=permalink&id=435285689889320

    ReplyDelete
  2. ದೀಪಾವಳಿಯ ಶುಭಾಶಯಗಳು

    ReplyDelete
  3. ತುಂಬಾ ಧನ್ಯವಾದಗಳು ಬದರಿ ಸರ್, ದೀಪಾವಳಿಯ ಶುಭಾಶಯಗಳು, ತಮಗೂ ದೀಪಾವಳಿಯ ಶುಭಾಶಯಗಳು ಮನಸಿನ ಮನೆಯವರೇ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...