Sunday, June 29, 2014

ಈ ರಂಗು ಬದಲಾಯಿಸುವ

ಈ ರಂಗು ಬದಲಾಯಿಸುವ 
ಜಗದಲಿ 
ಮನುಜನ ಇರಾದೆ 
ಸರಿ ಇಲ್ಲ

ಅಂದ ಶೃಂಗಾರ ಮಾಡಿ 
ನೀನು 
ಹೊರಗೆ ಹೋಗದಿರು 
ನಿಷ್ಠೆಯ ಇರಾದೆ 
ಸರಿ ಇಲ್ಲ

ಈ ಹೃದಯ ತುಂಬಾನೇ ಹುಚ್ಚು
ಚೇಷ್ಟೆ ಮಾಡದಿರು ಈ ಮರುಳನ
ನಿನ್ನಿಂದ ಕೀಟಲೆ ಮಾಡಬಹುದು
ತುಂಟನ ಇರಾದೆ
ಸರಿ ಇಲ್ಲ
ಈ ರಂಗು ಬದಲಾಯಿಸುವ.....

ಭುಜದಿಂದ ಶಿರವನ್ನು ತೆಗೆ ನಿನ್ನ
ಈ ಪ್ರೀತಿ ಪ್ರೇಮ ಇರಲಿ ಬಿಡು
ದೋಣಿಯನ್ನು ನಿಯಂತ್ರಿಸು ತರಂಗದಿಂದ
ಬಿರುಗಾಳಿಯ ಇರಾದೆ
ಸರಿ ಇಲ್ಲ
ಈ ರಂಗು ಬದಲಾಯಿಸುವ.....

ನಾನೇಗೆ ವಿದಾಯ ಹೇಳಲಿ
ನನಗಂತೂ ಯಾರದ್ದು ನಂಬಿಕೆ ಇಲ್ಲ
ಅಡಗಿಕೊಳ್ಳು ನನ್ನ ಕಂಗಳಲಿ
ದೇವರ ಇರಾದೆ
ಸರಿ ಇಲ್ಲ
ಈ ರಂಗು ಬದಲಾಯಿಸುವ.....

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ರಾಜ್ ಕುಮಾರ್

इस रंग बदलती दुनिया में
इंसान की नीयत ठीक नहीं
निकला न करो तुम सज-धजकर
ईमान की नीयत ठीक नहीं

ये दिल है बड़ा ही दीवाना
छेड़ा न करो इस पागल को
तुमसे न शरारत कर बैठे
नादान की नीयत ठीक नहीं
इस रंग बदलती...

काँधे से हटा लो सर अपना
ये प्यार मुहब्बत रहने दो
कश्ती को सम्भालो मौजों से
तूफ़ान की नीयत ठीक नहीं
इस रंग बदलती...

मैं कैसे खुदा हाफ़िज़ कह दूँ
मुझको तो किसी का यकीन नहीं
छुप जाओ हमारी आँखों में
भगवान की नीयत ठीक नहीं,
इस रंग बदलती...

http://www.youtube.com/watch?v=TMbHY5S7WUs

1 comment:

  1. ಹಸರತ್ ಜೈಪುರಿಯವರ ಸಾಹಿತ್ಯಕ್ಕೆ ರಫೀ ಸಾಬರ ದನಿ ಬಹಳ ಚೆನ್ನಾಗಿ ಒಪ್ಪಿದೆ.
    ತಮ್ಮ ಭಾವಾನುವಾದವೂ ಮನಸಿಗೆ ಹತ್ತಿರವಾಯಿತು.

    ರಾಜಕುಮಾರ್ ಚಿತ್ರಕ್ಕೆ ಜಿ. ಸಿಂಗ್ ಅವರ ಛಾಯಾಗ್ರಹಣವಿತ್ತು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...