Thursday, November 28, 2013

ನಾನಿರಲಿ ಇರದಿರಲಿ

!!ನಾನಿರಲಿ ಇರದಿರಲಿ
ಸುಗಂಧ ಬೀರುತ್ತಿರುವೆ
ಹೂವ ಮೊಗ್ಗಾಗಿ
ತಂಗಾಳಿಯಾಗಿ
ನಿಷ್ಠೆಯ ಹೂದೋಟದಲಿ!!

!!ವಾತಾವರಣ ಯಾವುದೇ ಇರಲಿ
ಈ ಹೂದೋಟದಲಿ
ಆಕರ್ಷಕ ಬಣ್ಣ ತುಂಬುವೆ
ಪ್ರೀತಿಯ ಪರಿಮಳ
ಹೀಗೆಯೇ ಕೇಶದಿಂದ ಹಾರುವುದು
ಶರತ್ಕಾಲ ಅಲ್ಲದೆ ವಸಂತವಿರಲಿ
ಹೀಗೆಯೇ ನಲಿದು ಅರಳುತ್ತಿರುವೆ
ಹೂವ ಮೊಗ್ಗಾಗಿ
ತಂಗಾಳಿಯಾಗಿ
ನಿಷ್ಠೆಯ ಹೂದೋಟದಲಿ!!
ನಾನಿರಲಿ ......

!!ಮರೆಯಾಗಿರುವೆ ಹೀಗೆ ನಾನು
ಏನು ಮಿಲನ ಏನು ಅಗಲಿಕೆ
ನೆನಪಿಲ್ಲ ನನಗೆ
ಹೃದಯದ ಗಲ್ಲಿಗೆ ಬಂದ ನಂತರ
ಕೇವಲ ಹೃದಯದ ನೆಲ
ನೆನಪಿದೆ ನನಗೆ
ಇದೇ ಭೂಮಿಯಲಿ ನಾನಿರುವೆ
ಹೂವ ಮೊಗ್ಗಾಗಿ
ತಂಗಾಳಿಯಾಗಿ
ನಿಷ್ಠೆಯ ಹೂದೋಟದಲಿ!!
ನಾನಿರಲಿ ......

!!ನಾನಿಲ್ಲದಾಗ
ನನ್ನ ಬೂದಿಯ ಮೇಲೆ
ನೀನು ನಿಲ್ಲುವೆ ನಡೆದಾಡುವಾಗ
ಅಶ್ರುಗಳಿಂದ ತೇವಗೊಂಡಿದ
ಚಂದಿರ ರಾತ್ರಿಯಲಿ
ಒಂದು ದ್ವನಿಯಂತೆ ಕೇಳುವೆ
ನಡೆದಾಡುವಾಗ
ಅಲ್ಲಿ ಎಲ್ಲಿಯೋ
ನಾನು ಸಿಗುವೆ ನಿನಗೆ
ಹೂವ ಮೊಗ್ಗಾಗಿ
ತಂಗಾಳಿಯಾಗಿ
ನಿಷ್ಠೆಯ ಹೂದೋಟದಲಿ!!
ನಾನಿರಲಿ ……

ಮೂಲ : ಮಜರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ರೋಶನ್
ಚಿತ್ರ : ಮಮತಾ
rahe naa rahe ham, mahakaa karege ban ke kali, ban ke sabaa, baage vafaa me mausam koi ho is chaman me rag banake rahege in fizaa me chaahat ki khushabu, yun hi zulfo se udegi, khizaayo yaa bahaare yunhi jhumate, yuhin jhumate aur khilate rahege, ban ke kali ban ke sabaa baage vafaa me rahe naa rahe ham khoye ham aise kyaa hai milanaa kyaa bichhadanaa nahi hai, yaad hamako guche me dil ke jab se aaye sirf dil ki zami hai, yaad hamako isi sarazami, isi sarazami pe ham to rahege, ban ke kali ban ke sabaa baage vafaa me rahe naa rahe ham jab ham na hoge tab hamaari khaak pe tum rukoge chalate chalate ashko se bhigi chaadani me ik sadaa si sunoge chalate chalate vahi pe kahi, vahi pe kahi ham tumase milege, ban ke kali ban ke sabaa baage vafaa me rahe naa rahe ham, mahakaa karege

Tuesday, November 26, 2013

ಮನುಷ್ಯ ಏನನ್ನು ಹೇಳುತ್ತಾನೋ

ಕೆಲವೊಮ್ಮೆ ಯೋಚಿಸುತ್ತೇನೆ
ನಾನೇನೋ ಹೇಳಬೇಕೆಂದು
ಕೆಲವೊಮ್ಮೆ ಯೋಚಿಸುತ್ತೇನೆ
ನಾನು ಮೌನವಾಗಿರುವೆಯೆಂದು

!!ಮನುಷ್ಯ ಏನನ್ನು ಹೇಳುತ್ತಾನೋ
ಮನುಷ್ಯ ಏನನ್ನು ಕೇಳುತ್ತಾನೋ
ಜೀವನ ಪರ್ಯಂತ ಆ ಧ್ವನಿ
ಅವನನ್ನು ಹಿಂಬಾಲಿಸುತ್ತದೆ
ಮನುಷ್ಯ ಏನನ್ನು ಕೊಡುತ್ತಾನೋ
ಮನುಷ್ಯ ಏನನ್ನು ತೆಗೆದುಕೊಳ್ಳುತ್ತಾನೋ
ಜೀವನ ಪರ್ಯಂತ ಆ ಪ್ರಾರ್ಥನೆ
ಅವನನ್ನು ಹಿಂಬಾಲಿಸುತ್ತದೆ!!

!!ಯಾವುದೇ ಇರಲಿ
ಎಲ್ಲ ಕನಸು ಸತ್ಯವಾಗಿರುವುದಿಲ್ಲ
ಅತಿ ಪ್ರೇಮ ಎಂದೂ ಒಳ್ಳೆಯದಲ್ಲ
ಎಂದಾದರೂ ಕೈ ಬಿಡಬೇಕಾದರೆ ಕಷ್ಟವಾಗುವುದು
ಪ್ರೀತಿಯ ಸಂಬಂಧ ಮುರಿದರೆ
ಪ್ರೀತಿಯ ಹಾದಿ ಮರೆತರೆ
ಹಾದಿಯಲಿ ನಂತರ
ನಿಷ್ಠೆ ಹಿಂಬಾಲಿಸುತ್ತದೆ!!
ಮನುಷ್ಯ ಏನನ್ನು.....

!!ಕೆಲವೊಮ್ಮೆ ಮನಸ್ಸು
ಬಿಸಿಲ ಕಾರಣ ಹಾತೊರೆಯುತ್ತದೆ
ಕೆಲವೊಮ್ಮೆ ನಂತರ
ನಲಿದು ಮಳೆ ಸುರಿಯುತ್ತದೆ
ಒಂದೇ ಕ್ಷಣದಲಿ
ಈ ವಾತಾವರಣ ಬದಲಾಗುವುದು
ದಾಹ ಎಂದೂ ತೀರುದಿಲ್ಲ
ಒಂದು ಹನಿಯೂ ಸಿಗುವುದಿಲ್ಲ
ಮತ್ತೆ ಕೆಲವೊಮ್ಮೆ
ಸುಂದರ ಮೇಘ ಹಿಂಬಾಲಿಸುತ್ತದೆ!!
ಮನುಷ್ಯ ಏನನ್ನು.....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಲಕ್ಷ್ಮಿಕಾಂತ್ ಪ್ಯಾರೆಲಾಲ್
ಚಿತ್ರ: ಮಜಬೂರ್

कभी सोचता हूँ के मैं कुछ कहू
कभी सोचता हूँ के मैं चूप रहू

आदमी जो कहता हैं, आदमी जो सुनता हैं
जिंदगीभर वो सदाये पीछा करती हैं
आदमी जो देता हैं, आदमी जो लेता हैं
जिंदगीभर वो दुवायें पीछा करती हैं

कोई भी हो हर ख्वाब तो सच्चा नहीं होता
बहोत ज़्यादा प्यार भी अच्छा नहीं होता
कभी दामन छुड़ाना हो तो मुश्किल हो
प्यार के रिश्तें टूटे तो, प्यार के रस्ते छूटे तो
रास्ते में फिर वफ़ायें पीछा करती हैं

कभी कभी मन धूप के कारण तरसता हैं
कभी कभी फिर झूम के सावन बरसता हैं
पलक झपकें यहा मौसम बदल जाये
प्यास कभी मिटती नही, एक बूँद भी मिलती नही
और कभी रिमझिम घटायें पीछा करती हैं
www.youtube.com/watch?v=-ArgZa-UsAM

Monday, November 25, 2013

ನಾನೆಲ್ಲಿದ್ದೇನೆ?

ನಾನೆಲ್ಲಿದ್ದೇನೆ?
ಹುಡುಕುತಿರುವೆ ನಾನು
ಸ್ವತಃ ನನ್ನನ್ನೇ
ಈ ಜಗದ ಜನಸಂದಣಿಯಲ್ಲಿ
ಆದರೆ ನಾನೆಲ್ಲಿದ್ದೇನೆ?

ಆಹಾ ನೋಡಿ
ತಾಯಿಯ ಮಡಿಲಲ್ಲಿ
ಮುದ್ದು ಮಗು
ತುಟಿಯಲಿ ಮೋಹಕ ನಗು
ಸುಖ ನಿದ್ರೆಯಲ್ಲಿ ಮಲಗಿದೆ
ತಾಯಿಯ ಮುಖದಲ್ಲೂ
ತೃಪ್ತ ಭಾವ
ಆದರೆ ನಾನಿರಲಿಲ್ಲ ಅಲ್ಲಿ
ನನ್ನಲ್ಲಿ ಆ ನಗು ಉಳಿಯಲಿಲ್ಲ
ನನಗೆ ಸುಖ ನೀಡಿದ ತಾಯಿಗೆ
ನನ್ನಿಂದ ಸುಖ ನೀಡಲಾಗಲಿಲ್ಲ
ಹಾಗಾದರೆ ನಾನೆಲ್ಲಿದ್ದೇನೆ?

ಅಲ್ಲಿ ನೋಡಿ
ಆ ಹುಡುಗ ಶಾಲೆಯ
ಗಣವೇಶ ಧರಿಸಿ
ನಾಯಿಯ ಹಿಂದೆ ಓಡುತ್ತಿದ್ದಾನೆ
ಅದರ ಬಾಲ ಹಿಡಿಯಲು
ಪ್ರಯತ್ನಿಸುತ್ತಿದ್ದಾನೆ
ಹುಡುಕುತ್ತಿದ್ದೇನೆ ನನ್ನನ್ನು ನಾನು
ಈ ಬಾಲ್ಯದ  ಆಟದಲಿ
ಆದರೆ ನನ್ನ ಉಪಸ್ಥಿತಿ ಇಲ್ಲ
ಜೂಜಾಡುತ್ತಿದ್ದೇನೆ ಸಂಸಾರದ ಆಟದಲಿ
ಹಾಗಾದರೆ ನಾನೆಲ್ಲಿದ್ದೇನೆ?

ನೋಡಿ ಇಲ್ಲಿ
ಎಷ್ಟೊಂದು ಉಲ್ಲಾಸ
ಎಷ್ಟೊಂದು ಉತ್ಸಾಹ ಅವನಲ್ಲಿ
ಒಹ್ ಇವನಲ್ಲಿ
ಖಂಡಿತ ನನ್ನನ್ನು ಹುಡುಕುವೆ
ನಾನಿರುವೆ ಬಹುಶ ಇಲ್ಲಿ
ಆದರೆ ದೇಹ ಕುಗ್ಗಿದೆ
ನಿರುತ್ಸಾಹ ತುಂಬಿದೆ
ನಾನಿರಲಿಲ್ಲ ಅಲ್ಲಿ
ಹಾಗಾದರೆ ನಾನೆಲ್ಲಿದ್ದೇನೆ?

ನಾನೆಲ್ಲಿದ್ದೇನೆ?
ಹುಡುಕುತಿರುವೆ ನಾನು
ಸ್ವತಃ ನನ್ನನ್ನೇ ......
by ಹರೀಶ್ ಶೆಟ್ಟಿ,ಶಿರ್ವ 

ಏನಿಂದ ಏನಾಯಿತು

!!ಏನಿಂದೇನಾಯಿತು
ವಿಶ್ವಾಸದ್ರೋಹಿ ನಿನ್ನ ಪ್ರೀತಿಯಲಿ
ಬಯಸಿದ್ದೇನು
ಪಡೆದದ್ದೇನು
ವಿಶ್ವಾಸದ್ರೋಹಿ ನಿನ್ನ ಪ್ರೀತಿಯಲಿ!!

!!ಬಿಡು
ಮೋಹಕ ಭ್ರಮೆಯಾದರೂ ಮುರಿಯಿತು
ಅರಿತೆ ಸೌಂದರ್ಯ ಏನೆಂದು
ಪ್ರೀತಿಯೆಂದು ಕರೆಯುತ್ತಾರೆ ಜಗವೆಲ್ಲ
ಅರಿತೆ ಇದೆಂತಹ ಮಾಯೆಯೆಂದು
ಹೃದಯ ಏನೆಲ್ಲವನ್ನು ಸಹಿಸಲಿಲ್ಲ
ವಿಶ್ವಾಸದ್ರೋಹಿ ನಿನ್ನ ಪ್ರೀತಿಯಲಿ!!

!!ನಿನ್ನ ನನ್ನ ಮಧ್ಯೆ ಈಗಂತೂ
ಶತಮಾನಗಳ ಅಂತರವಿದೆ
ಈಗ ನಂಬಲಾರರು ಯಾರೂ
ನಾನು ನೀನು
ಒಂದೇ ಹಾದಿಯಲಿ
ಜೊತೆಯಾಗಿ ನಡೆದವರೆಂದು
ಇನ್ನೇನು ಆಗಬೇಕು
ವಿಶ್ವಾಸದ್ರೋಹಿ ನಿನ್ನ ಪ್ರೀತಿಯಲಿ!!

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಆರ್. ಡೀ . ಬರ್ಮನ್
ಚಿತ್ರ : ಗೈಡ್

kyaa se kyaa ho gayaa, bewafaa tere pyaar mein
chaahaa kyaa, kyaa milaa, bewafaa tere pyaar mein

chalo suhaanaa bharam to tootaa
jaanaa ke husn kyaa hain
kahatee hain jis ko pyaar duniyaa
kyaa cheej kyaa balaa hain
dil ne kyaa naa sahaa, bewafaa tere pyaar mein

tere mere dil ke beech ab to
sadiyon ke faasale hain
yakin hogaa kise ke hum tum
yek raah sang chale hain
honaa hai, aaur kyaa, bewafaa tere pyaar mein
http://www.youtube.com/watch?v=_qVJKJfUOP4

Sunday, November 24, 2013

ಕಣ್ಣೀರು ನೀಡೋಯಿತು ಕನಸು ನನ್ನ

!!ಕಣ್ಣೀರು ನೀಡೋಯಿತು ಕನಸು ನನ್ನ
ಕುಳಿತಿರುವೆ ಕಾಯುತ ಹಗಲನ್ನ!!

!!ಅದೇ ನೋವ ಹೃದಯ
ಅದೇ ಚಂದ್ರ ತಾರೆ
ನಾನಿಲ್ಲಿ ನಿರಾಸರೆ
ಮತ್ತದೇ ರಾತ್ರಿ
ಮತ್ತದೇ ಮಾತೆಲ್ಲ
ಆದರೂ ಸುಳಿವಿಲ್ಲ ಚೋರನ!!
ಕಣ್ಣೀರು ನೀಡೋಯಿತು.....

!!ಎಂಥದಿದು ಈ ಜೀವನ
ಅಂದರೆ ಉಸಿರಿಂದ ನಾನು ಸೋತೆ
ಅಂದರೆ ಹೃದಯ ಸೋತು
ನಾನೂ ಸೋತೆ
ನಿರಾಶ್ರಿತ ನಿಸ್ಸಹಾಯ ಹೆಣ್ಣೊಂದು
ಈ ಜೀವನದಿಂದ ಸೋತಳು ನೊಂದು
ಅದರಲ್ಲೂ ದುಃಖದ ಅಂಧಕಾರ ಘನ!!
ಕಣ್ಣೀರು ನೀಡೋಯಿತು.....

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಎಸ್ . ಡೀ .ಬರ್ಮನ್
ಚಿತ್ರ : ಜೆವೆಲ್  ಥೀಫ್

रुला के गया सपना मेरा
बैठी हूँ कब हो सवेरा
रुला के गया सपना...

वही है ग़म-ए-दिल, वही है चंदा-तारे
वही हम बेसहारे
आधी रात वही है, और हर बात वही है
फिर भी न आया लुटेरा
रुला के गया सपना...

कैसी ये ज़िंदगी, कि साँसों से हम ऊबे
कि दिल डूबा, हम डूबे
इक दुखिया बेचारी, इस जीवन से हारी
उस पर ये ग़म का अन्धेरा
रुला के गया सपना...
http://www.youtube.com/watch?v=0lJuhRJsqLg

Saturday, November 23, 2013

ಮುದ್ದು ಹೃದಯವೆ

ಮುದ್ದು ಹೃದಯವೆ
ಮುದ್ದು ಹೃದಯವೆ
ಇಚ್ಛೆ ಏನಿದೆ
ಆಕಾಂಕ್ಷೆ ಏನಿದೆ

ನಾನು ಅಲೆಯುತ್ತಿರುವೆ
ಏಕೆ ಅಲೆಯುತ್ತಿರುವೆ
ಈ ಮರುಭೂಮಿಯಲಿ
ಹೀಗೆ ಅನಿಸುತ್ತದೆ
ತರಂಗಗಳು ದಾಹದಲ್ಲಿವೆ
ಈ ಸಾಗರದಲಿ
ಸಮಸ್ಯೆ ಏನಿದೆ
ಈ ಸಮಸ್ಯೆ ಏಕಿದೆ
ಒಂದು ನೆರಳಿನಂತೆ
ಸನಿಹ ಏನಿದೆ
ಮುದ್ದು....

ಪ್ರಳಯ ಎಂಥದಿದು
ತೊಂದರೆ ಎಂಥದಿದು
ಹೇಳಲಾಗುವುದಿಲ್ಲ
ಯಾರಿಗಾಗಿ ಈ ಹಂಬಲವೆಂದು
ಜೀವನ ಕಳೆದಂತಾಗಿದೆ
ಗೊಂದಲದಲ್ಲಿದೆ
ಈ ಭೂಮಿ ಮೌನವಾಗಿದೆ
ಈ ಆಕಾಶ ಮೌನವಾಗಿದೆ
ಹಾಗಾದರೆ ಈ ಹೃದಯಬಡಿತದಂತೆ
ಎಲ್ಲೆಡೆ ಏನಿದೆ
ಮುದ್ದು....

ಮುದ್ದು ಹೃದಯವೆ
ಇಂತಹ ಹಾದಿಯಲಿ
ಎಷ್ಟು ಮುಳ್ಳುಗಳಿವೆ
ಆಕಾಂಕ್ಷೆ ಪ್ರತಿಯೊಬ್ಬರಿಗೂ
ನೋವು ಹಂಚಿದೆ
ಎಷ್ಟೋ ಗಾಯಗೊಂಡಿದ್ದಾರೆ
ಎಷ್ಟೋ ನರಳುತ್ತಿದ್ದಾರೆ
ಈ ದೈವತ್ವದಲ್ಲಿ
ನಿನ್ನ ಅಸ್ತಿತ್ವ ಏನಿದೆ
ನಿನ್ನ ಅಸ್ತಿತ್ವ ಏನಿದೆ
ನಿನ್ನ ಅಸ್ತಿತ್ವ ಏನಿದೆ
ಮುದ್ದು....

ಮೂಲ : ಜಾನಿಸಾರ್ ಅಕ್ತರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಖಯ್ಯಾಮ್
ಚಿತ್ರ : ರಜಿಯಾ ಸುಲ್ತಾನ್

Aye dile naadan, aye dile naadan
aarzoo kya hain, justaju kya hain

 Ham bhatakate hain, kyon bhatakate hain dashtao sehara me
 Aisa lagata hain, mauj pyasee hain apane dariya me
 Kaisee ulajan hain, kyon yeh ulajan hain
 Ek saaya sa, rubaru kya hain

 Kya kayaamat hain, kya musibat hain
 Kah nahee sakate kiskaa aramaan hain
 Jindagee jaise khoyee khoyee hain, hairaan hairaan hain
 Yeh jamin chup hain, aasmaan chup hain
 Phir yeh dhadakan see char su kya hain

 Aye dile naadan aisee raaho me kitane kante hain
 Aaraju ne har kisee dil ko dard bante hain
 Kitane ghaayal hain, kitane bismil hain
 Iss khudaee me ek too kya hain
http://www.youtube.com/watch?v=MpK2rGflVmw

Thursday, November 21, 2013

ಈ ಕಣಿವೆ ಈ ಪರಿಸರ

ಈ ಕಣಿವೆ ಈ ಪರಿಸರ
ಕರೆಯುತ್ತಿದೆ ನಿನ್ನನ್ನು-೨
ಮೌನದ ಧ್ವನಿ
ಕರೆಯುತ್ತಿದೆ ನಿನ್ನನ್ನು
ಈ ಕಣಿವೆ ಈ ಪರಿಸರ.....

ಹಂಬಲಿಸುತ್ತಿದೆ ಅರಳಿದ ಹೂವು
ಅಧರ ಸ್ಪರ್ಶಿಸಲು
ತಂಪು ತಂಪು ತಂಗಾಳಿ
ಕರೆಯುತ್ತಿದೆ ನಿನ್ನನ್ನು
ಮೌನದ  ಧ್ವನಿ
ಕರೆಯುತ್ತಿದೆ ನಿನ್ನನ್ನು
ಈ ಕಣಿವೆ ಈ ಪರಿಸರ....

ನಿನ್ನ ಕೇಶದಿಂದ
ಸುಗಂಧದ ದಾನ ತೆಗೆದುಕೊಳ್ಳಲು
ತೇಲುವ ಮೇಘಗಳು
ಕರೆಯುತ್ತಿದೆ ನಿನ್ನನ್ನು
ಮೌನದ ಧ್ವನಿ
ಕರೆಯುತ್ತಿದೆ ನಿನ್ನನ್ನು
ಈ ಕಣಿವೆ ಈ ಪರಿಸರ.....

ಸುಂದರ ಸುಕೋಮಲ ಪಾದಗಳನ್ನು
ನೋಡಿದ ಕ್ಷಣದಿಂದ
ಝರಿಯ ಮೋಹಕ ಅಂದ
ಕರೆಯುತ್ತಿದೆ ನಿನ್ನನ್ನು
ಮೌನದ  ಧ್ವನಿ
ಕರೆಯುತ್ತಿದೆ ನಿನ್ನನ್ನು
ಈ ಕಣಿವೆ ಈ ಪರಿಸರ.....

ನನ್ನ ಕೇಳಬೇಡ
ಇವರ ಮಾತಾದರೂ ಕೇಳು ನೀನು
ಪ್ರತಿಯೊಂದು ಹೃದಯದ ಹರಕೆ
ಕರೆಯುತ್ತಿದೆ ನಿನ್ನನ್ನು
ಮೌನದ ಧ್ವನಿ
ಕರೆಯುತ್ತಿದೆ ನಿನ್ನನ್ನು
ಈ ಕಣಿವೆ ಈ ಪರಿಸರ.....

ಈ ಕಣಿವೆ ಈ ಪರಿಸರ.....

ಮೂಲ : ಸಾಹಿರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ರವಿ
ಚಿತ್ರ : ಆಜ್ ಔರ್ ಕಲ್
ये वादियाँ ये फ़िज़ाएं बुला रही हैं तुम्हे \- २
खामोशियों की सदाएं बुला रही हैं तुम्हे 
ये वादियाँ ये फ़िज़ाएँ बुला रही हैं तुम्हे 

तुमहारी ज़ुल्फों से खुशबू की भीख लेने को 
झुकी झुकी सी घटाएं बुला रही हैं तुम्हे 
खामोशियों की सदाएँ ... 

हसीं चम्पाई पैरों को जबसे देखा है 
नदी की मस्त अदाएं बुला रही हैं तुम्हे 
खामोशियों की सदाएँ ... 

मेरा कहा ना सुनो दिल की बात तो सुनलो 
हर एक दिल की दुआएँ बुला रही हैं तुम्हे 
खामोशियों की सदाएं बुला रही हैं तुम्हे 

ये वादियाँ ये फ़िज़ाएँ बुला रही हैं तुम्हे ... 

Wednesday, November 20, 2013

ಹೃದಯದಲ್ಲಿರಿಸಿ ನಿನ್ನನ್ನು

ಹೃದಯದಲ್ಲಿರಿಸಿ ನಿನ್ನನ್ನು
ಮುಚ್ಚುವೆ ನಾನು ಕಂಗಳನ್ನು
ಪೂಜಿಸುವೆ ನಿನ್ನನ್ನು
ನಿನ್ನದಾಗಿರುವೆ ನಾನು

ಕೇವಲ ನಾನೇ ನೋಡುವೆ
ನಿನ್ನನ್ನು ನಲ್ಲ
ಇನ್ಯಾರೂ ಬೇಡ ನೋಡುದು
ಒಂದು ಕ್ಷಣಕ್ಕೂ
ಈ ಯೋಚನೆ ಇರದಿರಲಿ
ಯಾವ ರೀತಿ ನಾವು ಸಿಗುವುದು
ಎಲ್ಲರಿಂದ ರಕ್ಷಿಸಿ ನಿನ್ನನ್ನು
ಮುಚ್ಚುವೆ ನಾನು ಕಂಗಳನ್ನು
ಪೂಜಿಸುವೆ ನಿನ್ನನ್ನು..........

ಇರದಿರಲಿ
ಯಾವುದೇ ಬಂಧನ
ಯಾವುದೇ ಕಾವಲು
ಹಾಗು ಜಗದ ಮದಿಲು
ತಿಳಿಯದಿರಲಿ ಯಾರಿಗೂ
ಮನ ತುಂಬಿ ಪ್ರೀತಿಸಲಿ
ಎರಡು ಪ್ರೇಮಿ ಮರುಳು
ನಿನ್ನ ಮಡಿಲಲಿಟ್ಟು ತಲೆಯನ್ನು
ಮುಚ್ಚುವೆ ನಾನು ಕಂಗಳನ್ನು
ಪೂಜಿಸುವೆ ನಿನ್ನನ್ನು...........

ನಿನ್ನದೇ ಮುಖ ನೋಡಿ ನಲ್ಲ
ನಾನು ಮಲಗುವೆ ರಾತ್ರಿಯಲಿ
ಮುಂಜಾನೆ ಕಣ್ಣು ತೆರೆದಾಗ
ನಿನ್ನದೇ ದರ್ಶನ ಆಗಲಿ
ಅಪ್ಪಿಕೊಂಡು ನಿನ್ನನ್ನು
ಮುಚ್ಚುವೆ ನಾನು ಕಂಗಳನ್ನು
ಪೂಜಿಸುವೆ ನಿನ್ನನ್ನು...........

ಮೂಲ/ಸಂಗೀತ :ರವಿಂದ್ರ ಜೈನ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಚಿತ್ರ : ಫಕಿರಾ

dil me tujhe bithake, kar lungee mai band aankhe
puja karungee teree, ho ke rahungi teree

mai hee mai dekhu tujhe piya aur naa dekhe koyee
ek pal bhee yeh soch rahe naa kis vidhee milna hoi
sabse tumhe bachake, kar lungee mai band aankhe
puja karungee teree........

naa koyee bandhan jagat kaa koyee pahara naa divar
koyee naa jane do divane jee bhar kar le pyar
kadmo me tere aake, kar lungee mai band aankhe
puja karungee teree........

teraa hee mukh dekh ke piya rat ko mai so jau
bhor bhai jab aankh khule toh tere hee darshan pau
tujhko gale lagake, kar lungee mai band aankhe
puja karungee teree........
www.youtube.com/watch?v=FygMa1TRlrQ

Tuesday, November 19, 2013

ಹಲುಬುತ್ತಿರುವ ಈ ಹೃದಯದಿಂದ


ನಿರ್ಜೀವ ಈ ಹೃದಯಕ್ಕೆ
ನಿನ್ನ ಪ್ರೀತಿ ಜೀವ ನೀಡಿತು
ನಂತರ ನಿನ್ನ ಪ್ರೀತಿಯೇ
ಈ ಹೃದಯವನ್ನು ನಾಶಗೊಳಿಸಿತು

!!ಹಲುಬುತ್ತಿರುವ ಈ ಹೃದಯದಿಂದ
ನೋವ ಅಲೆಗಳು ಏಳುತ್ತಿವೆ
ನನಗೆ ಸಜೆ ಸಿಕ್ಕಿದೆ ಪ್ರೀತಿಯ
ಅಂಥದೇನು ಅಪರಾಧ ಮಾಡಿದೆ
ಅಂದರೆ ಸೋತೆ ನಾನು 
ಸೋತೆ ನಾನು
ಸೋತೆ ನಾನು ನಿನ್ನ ಪ್ರೀತಿಯಲಿ!!-೪

!!ವಿಚಿತ್ರ ಈ ಪ್ರೀತಿ ಗೆಳೆಯರೇ
ಕ್ಷಣ ಎರಡು ಕ್ಷಣದ ಖುಷಿ
ನೋವಿನ ಖಜಾನೆ ಸಿಗುತ್ತದೆ
ಸಿಗುತ್ತದೆ ಏಕಾಂತ
ಬರಿ ಕಣ್ಣೀರು
ಬರಿ ನೋವು
ಬರಿ ಪರಿತಪ
ಬರಿ ಸೋಲು
ನಿನ್ನ ಚಹರೆ ಕಂಡು ಬರುತ್ತದೆ
ನಿನ್ನ ಚಹರೆ ಕಂಡು ಬರುತ್ತದೆ
ನನಗೆ ಹಗಲಿನ ಬೆಳಕಲಿ
ನಿನ್ನ ನೆನಪು ಕಾಡುತ್ತದೆ
ನಿನ್ನ ನೆನಪು ಕಾಡುತ್ತದೆ
ರಾತ್ರಿಯ ಕತ್ತಲಲಿ
ಚಡಪಡಿಕೆಯಿಂದ ಈ ಹೃದಯದಿಂದ ನೋವ ಅಲೆಗಳು ಏಳುತ್ತಿವೆ
ನನಗೆ ಸಜೆ ಸಿಕ್ಕಿದೆ ಪ್ರೀತಿಯ ಅಂಥದೇನು ಅಪರಾಧ ಮಾಡಿದೆ
ಅಂದರೆ ಸೋತೆ ನಾ, ಸೋತೆ ನಾ
ಸೋತೆ ನಾ ನಿನ್ನ ಪ್ರೀತಿಯಲಿ!!
ಕೊರಗಿ ಕೊರಗಿ....

!!ಸಿಕ್ಕಿದ್ದರೆ ದೇವರು
ಕೇಳುವೆ ದೇವರೇ
ಮಣ್ಣ ದೇಹ ನೀಡಿ ನನಗೆ
ಗಾಜಿನಂತ ಹೃದಯ ಏಕೆ ಮಾಡಿದೆ
ಅದರ ಮೇಲೆ ನೀಡಿದೆ ಸ್ವರೂಪ
ಅಂದರೆ ಅದು ಮಾಡುತ್ತದೆ ಒಲವು
ವಾಹ್ ರೆ ವಾಹ್  ನಿನ್ನ ಮಾಯೆ
ವಾಹ್ ರೆ ವಾಹ್  ನಿನ್ನ ಮಾಯೆ ಅದರ ಮೇಲೆ ನೀಡಿದೆ ಅದೃಷ್ಟ
ಕೆಲವೊಮ್ಮೆ ಮಿಲನ , ಕೆಲವೊಮ್ಮೆ ಅಗಲಿಕೆ
ಕೆಲವೊಮ್ಮೆ ಮಿಲನ , ಕೆಲವೊಮ್ಮೆ ಅಗಲಿಕೆ ಏನಿದು ಒಲವಿಕೆ
ಅತ್ತು ಅತ್ತು ಈ ಹೃದಯದಿಂದ ನೋವ ಅಲೆಗಳು ಏಳುತ್ತಿವೆ
ನನಗೆ ಸಜೆ ಸಿಕ್ಕಿದೆ ಪ್ರೀತಿಯ
ಅಂಥದೇನು ಅಪರಾಧ ಮಾಡಿದೆ
ಅಂದರೆ ಸೋತೆ ನಾ,ಸೋತೆ ನಾ
ಸೋತೆ ನಾ ನಿನ್ನ ಪ್ರೀತಿಯಲಿ!!
ಕೊರಗಿ ಕೊರಗಿ....

ಮೂಲ : ಮೆಹಬೂಬ್ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಡಾಮಿನಿಕ್  ಸೆರೆಜೋ ಹಾಗು  ಕೆ . ಕೆ  .
ಸಂಗೀತ : ಇಸ್ಮೈಲ್ ದರ್ಬಾರ್
ಚಿತ್ರ : ಹಮ್ ದಿಲ್ ದೇ ಚುಕೆ ಸನಮ್
Bejaan Dil Ko
Bejaan Dil Ko
Bejaan Dil Ko Tere Ishq Ne Zinda Kiya
Phir Tere Ishq Ne Hi Is Dil Ko Tabah Kiya

Tadap Tadapke Is Dil Se Aah Nikalti Rahi Hai
Mujhko Saza Di Pyaar Ki Aisa Kya Gunaah Kiya
To Lut Gaye Haan Lut Gaye
To Lut Gaye Hum Teri Mohabbat Mein

Tadap Tadapke Is Dil Se Aah Nikalti Rahi Hai
Mujhko Saza Di Pyaar Ki Aisa Kya Gunaah Kiya
To Lut Gaye Haan Lut Gaye
To Lut Gaye Hum Teri Mohabbat Mein

Tadap Tadapke Is Dil Se Aah Nikalti Rahi Hai
Mujhko Saza Di Pyaar Ki Aisa Kya Gunaah Kiya
To Lut Gaye Haan Lut Gaye
To Lut Gaye Hum Teri Mohabbat Mein

Tadap Tadapke Is Dil Se Aah Nikalti Rahi Hai
Mujhko Saza Di Pyaar Ki Aisa Kya Gunaah Kiya
To Lut Gaye Haan Lut Gaye
To Lut Gaye Hum Teri Mohabbat Mein

Ajab Hai Ishq Yaara
Pal Do Pal Ki Khushiyaan
Gam Ke Khazaane Milte Hain
Milti Hai Tanhaiyaan
Kabhi Aansoon Kabhi Aahein
Kabhi Shikve Kabhi Naalein
Tera Chehra Nazar Aaye
Tera Chehra Nazar Aaye Mujhe Din Ke Ujaalon Mein
Teri Yaadein Tadpayein
Teri Yaadein Tadpayein Raaton Ke Andheron Mein
Tera Chehra Nazar Aaye
Machal Machalke Is Dil Se Aah Nikalti Rahi Hai
Mujhko Saza Di Pyaar Ki Aisa Kya Gunaah Kiya
To Lut Gaye Haan Lut Gaye
To Lut Gaye Hum Teri Mohabbat Mein

Agar Mile Khuda To
Poochhoonga Khudaya
Jism Mujhe Deke Mitti Ka
Sheeshay Sa Dil Kyon Banaya
Aur Us Pe Diya Fitrat
Ke Woh Karta Hai Mohabbat
Wah Re Wah Teri Kudrat
Wah Re Wah Teri Kudrat Us Pe De Diya Kismat
Kabhi Hai Milan Kabhi Furqat
Kabhi Hai Milan Kabhi Furqat Hai Yehi Kya Vo Mohabbat
Wah Re Wah Teri Kudrat
Sisak Sisakke Is Dil Se Aah Nikalti Rahi Hai
Mujhko Saza Di Pyaar Ki Aisa Kya Gunaah Kiya
To Lut Gaye Haan Lut Gaye
To Lut Gaye Hum Teri Mohabbat Mein

Tadap Tadapke Is Dil Se Aah Nikalti Rahi Hai
Mujhko Saza Di Pyaar Ki Aisa Kya Gunaah Kiya
To Lut Gaye Haan Lut Gaye
To Lut Gaye Hum Teri Mohabbat Mein
http://www.youtube.com/watch?v=CaPKkSrOTQM

Monday, November 18, 2013

ಸ್ವರ ಮೌನವಾಗಿದೆ

ಮನ್ನಾ ಡೇ ಕ್ಲಾಸಿಕ್ "ಸುರ್ ನ ಸಜೆ ,ಕ್ಯಾ ಗಾವು ಮೈ " ಅದರ ಒಂದು ಅರ್ಥಾನುವಾದ.

ಸ್ವರ ಮೌನವಾಗಿದೆ
ಏನನ್ನು ಹಾಡುವುದು ನಾನು -೨
ಸ್ವರದ ವಿನಾಃ
ಜೀವನ ರಸಹೀನ -೨
ಸ್ವರ ಮೌನವಾಗಿದೆ....

ಎರಡೂ ಜಗತ್ತು
ನನ್ನಿಂದ ಮುನಿಸಿಕೊಂಡಿದೆ -೨
ನಿನ್ನ ವಿನಾಃ
ಈ ಗೀತೆ ಸಹ ಸುಳ್ಳಾಗಿದೆ-೨
ಸ್ವರ ಮೌನವಾಗಿದೆ....

ತಟ ಸೇರಿ
ನದಿಗಳು ಹಾಡುತ್ತಿವೆ-೨
ಇನಿಯ ನೀನೆಲ್ಲಿ
ಕೋಗಿಲೆ ಹಾಡುತ್ತಿದೆ-೨
ಸ್ವರ ಮೌನವಾಗಿದೆ....

ಸಂಗೀತ ಮನಸ್ಸಿಗೆ ರೆಕ್ಕೆ ನೀಡುತ್ತದೆ
ಗೀತೆಯಲಿ ಹನಿ ಹನಿ ರಸ ಸುರಿಸುತ್ತದೆ-೨
ಸ್ವರದ ಧ್ಯಾನ ಅಂದರೆ
ಪರಮೇಶ್ವರನ-೨
ಸ್ವರ ಮೌನವಾಗಿದೆ....

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮನ್ನಾ ಡೇ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಬಸಂತ್ ಬಹಾರ್
Sur Na Saje Kya Gaaun Main \- 2
Sur Ke Bina, Javan Suna \- 2
Sur Na Saje Kya Gaun Main
Sur Na Saje...................................

Donon Jahaan, Mujh Se Roothe \- 2
Tere Bina Ye Geet Bhi Jhoothe \- 2
Sur Na Saje...................................

Tat Se Lagi Nadiya Gaave \-2
Pi Tum Kahaan Papeeha Gaave \-2
Sur Naa Saje ...............................

(Sangeet Man Ko Pankh Lagaaye
Geeton Men Rim-Jhim Ras Barasaaye ) \- 2
Svar Ki Saadhana \- 2
Parameshvar Ki
Sur Na Saje.............................
www.youtube.com/watch?v=hpVvfPKyjLM

Sunday, November 17, 2013

ಈ ತಿರುವಿನಿಂದ ಹೋಗುತ್ತದೆ


!!ಈ ತಿರುವಿನಿಂದ ಹೋಗುತ್ತದೆ
ಕೆಲವು ಮಂದ ಗತಿಯ ರಸ್ತೆ
ಕೆಲವು ವೇಗ ಗತಿಯ ಮಾರ್ಗ
ಕಲ್ಲಿನ ಕೋಟೆಯತ್ತ
ಗಾಜಿನ ಮನೆಗೆ
ಒಣಹುಲ್ಲಿನ ನಿವಾಸ ತನಕ
ಈ ತಿರುವಿನಿಂದ ಹೋಗುತ್ತದೆ!!
ಈ ತಿರುವಿನಿಂದ ಹೋಗುತ್ತದೆ ....

!!ಬಿರುಗಾಳಿಯಂತೆ ಹಾರಿ ಬಂದು
ಒಂದು ಹಾದಿ ಹಾದು ಹೋಗುತ್ತದೆ
ಲಜ್ಜೆಯಿಂದ ಹೆಜ್ಜೆಯನಿಟ್ಟು
ನಮ್ರತೆಯಿಂದ ಇಳಿಯುತ್ತದೆ
ಈ ರೇಷ್ಮೆಯಂತಹ ಹಾದಿಯಲಿ
ಅದೊಂದು ಹಾದಿ ಇರಬಹುದು
ನಿನ್ನಲ್ಲಿಗೆ ಅದು ತಲುಪುತ್ತದೆ
ಈ ತಿರುವಿನಿಂದ ಹೋಗುತ್ತದೆ!!
ಈ ತಿರುವಿನಿಂದ ಹೋಗುತ್ತದೆ ....

!!ಒಂದು ದೂರದಿಂದ ಬರುತ್ತದೆ
ಬಳಿ ಬಂದು ತಿರುಗುತ್ತದೆ
ಒಂದು ಹಾದಿ ಏಕಾಂಗಿ
ನಿಲ್ಲುತ್ತದೆ ಅಲ್ಲದೆ ಚಲಿಸುತ್ತದೆ
ನಾನಿದನ್ನು ಯೋಚಿಸಿ ಕುಳಿತಿರುವೆ
ಅದೊಂದು ಹಾದಿ ಇರಬಹುದು
ನಿನ್ನಲ್ಲಿಗೆ ಅದು ತಲುಪುತ್ತದೆ
ಈ ತಿರುವಿನಿಂದ ಹೋಗುತ್ತದೆ!!
ಈ ತಿರುವಿನಿಂದ ಹೋಗುತ್ತದೆ ....
ಈ ತಿರುವಿನಿಂದ ಹೋಗುತ್ತದೆ ....

!!ಈ ತಿರುವಿನಿಂದ ಹೋಗುತ್ತದೆ
ಕೆಲವು ಮಂದ ಗತಿಯ ರಸ್ತೆ
ಕೆಲವು ವೇಗ ಗತಿಯ ಮಾರ್ಗ
ಕಲ್ಲಿನ ಕೋಟೆಯತ್ತ
ಗಾಜಿನ ಮನೆಗೆ
ಒಣಹುಲ್ಲಿನ ನಿವಾಸ ತನಕ
ಈ ತಿರುವಿನಿಂದ ಹೋಗುತ್ತದೆ!!
ಈ ತಿರುವಿನಿಂದ ಹೋಗುತ್ತದೆ ....

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೆಶ್ಕರ್. ಕಿಶೋರ್ ಕುಮಾರ್
ಸಂಗೀತ : ಆರ್. ಡಿ.ಬರ್ಮನ್
ಚಿತ್ರ : ಆಂಧಿ
Is Mod Se Jaate Hain
Kuch Sust Kadam Raste Kuchh Tez Qadam Raahen
Patthar Ki Haveli Ko Shishe Ke Gharaundon Men
Tinakon Ke Nasheman Tak Is Mod Se Jaate Hain

Aandhi Ki Tarahu Dakar Ik Raah Guzarati Hai
Sharamaati Hui Koi Qadamon Se Utarati Hai
In Reshami Raahon Men Ik Raah To Vo Hogi
Tum Tak Jo Pahunchati Hai Is Mod Se Jaati Hai
Is Mod Se Jaate Hain

Ik Dur Se Aati Hai Paas Aake Palatati Hai
Ik Raah Akeli Si Rukati Hai Na Chalati Hai
Ye Sochake Baithi Hun Ik Raah To Vo Hogi
Tum Tak Jo Pahunchati Hai Is Mod Se Jaate Hain

Is Mod Se Jaate Hain
Kuchh Sust Qadam Raste Kuchh Tez Qadam Raahen
Patthar Ki Haveli Ko Shiishe Ke Gharondon Men
Tinakon Ke Nasheman Tak Is Mod Se Jaate Hain
Is Mod Se Jaate Hain
http://www.youtube.com/watch?v=VvJwj6Iml9I

Saturday, November 16, 2013

ಈ ಜಗವೆಲ್ಲ

!!ಈ ಜಗವೆಲ್ಲ
ಈ ಸಭೆಯೆಲ್ಲ
ನನಗೀಗ ನಿರರ್ಥಕವೆಲ್ಲ!!-೨

!!ಯಾರಿಗೇಳಲಿ
ಹಂಬಲಿಸುವ ಮನಸ್ಸಿನ ವ್ಯಥೆಯ
ನಂದಿ ಹೋಗುವ ದೀಪ ನಾನು
ನನ್ನದೇ ಗೋರಿಯ
ಬಯಸುವೆ ಮರೆಯಲೆಂದು
ಆದರೆ ಮರೆಯಲಾಗುವುದಿಲ್ಲ
ಎಷ್ಟು ಸಂಭ್ರಮದಿಂದ ನಡೆದಿತ್ತು
ಶವ ಯಾತ್ರೆ ವಸಂತದ!!
ಈ ಜಗವೆಲ್ಲ.......

!!ಅರಿವಿಲ್ಲ ನನ್ನ ಅವಸ್ಥೆಯ
ತಿಳಿದಿಲ್ಲ ಅವಳ ಸುದ್ಧಿ ಸ್ಥಿತಿಯ 
ವೈರಿಗೂ ಇಂತಹ ಶಿಕ್ಷೆ
ಸಿಗದಿರಲಿ ಪ್ರೀತಿಯ
ದೇವರು ಸಿಗುವರವರಿಗೆ
ದೇವರನ್ನು ಹುಡುಕುವವರಿಗೆ
ಕೇವಲ ಒಂದೇ ಒಂದು ನೋಟ
ನನ್ನ ಪ್ರೇಯಸಿಯ ಸಿಗಲಿ ನನಗೆ!!
ಈ ಜಗವೆಲ್ಲ.......

!!ಏಕಾಂತದಲಿ ಬಂದೂ
ನನಗೆ ಆಸರೆ ಸಿಗಲಿಲ್ಲ
ವೇದನೆಯನ್ನು ಮರೆಯಲು
ನನಗ್ಯಾವುದೇ ನೆಪ ಸಿಗಲಿಲ್ಲ
ಹೃದಯ ಬಯಸುವಾಗ ಪ್ರೀತಿಯನ್ನು
ಏನಂಥ ತಿಳಿಯಲಿ ಆ ಜಗತ್ತನ್ನು
ಗೆದ್ದ ಬಾಜಿಯನ್ನೂ ಸೋತು
ನಾನು ಹುಡುಕುತ್ತಿರುವೆ ಅಗಲಿದ ಪ್ರೀತಿಯನ್ನು!!
ಈ ಜಗವೆಲ್ಲ.......

!!ದೂರದಲ್ಲಿ ಕಣ್ಣಿಂದ ಕಣ್ಣೀರು
ಸುರಿಸುತ್ತಿದ್ದಾರೆ ಯಾರೋ
ಹೇಗೆ ತಿಳಿಯದಿರುವುದು ನಾನು
ನನ್ನನ್ನು ಕರೆಯುವಾಗ ಯಾರೋ
ಒಂದೇ ಮುರಿದ ಹೃದಯ ಜೋಡಿಸು
ಇಲ್ಲವಾದರೆ ಎಲ್ಲಾ ಬಂಧನಗಳನ್ನು ಮುರಿದು ಬಿಡು
ಹೇ ಪರ್ವತ ಹಾದಿ ನೀಡು ನನಗೆ
ಹೇ ಮುಳ್ಳುಗಳೇ ಬಿಟ್ಟು ಬಿಡಿ ನನ್ನ ಕಾಲನ್ನು!!
ಈ ಜಗವೆಲ್ಲ.......

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಮದನ್ ಮೋಹನ್
ಚಿತ್ರ : ಹೀರ್ ರಾಂಜಾ
Ye duniyaa ye mahafil
mere kaam kii nahiin (2)

Kisako sunaauu.n haal-e-dil beqaraar kaa
bujhataa huaa charaag huu.n apane mazaar kaa
ai kaash bhuul jaauu.n magar bhuulataa nahii.n
kis dhuum se uthaa thaa janaazaa bahaar kaa
ye duniyaa...

Apanaa pataa mile na khabar yaar kii mile
dushman ko bhii naa aisii sazaa pyaar kii mile
unako khudaa mile hai khudaa kii jinhe talaash
mujhako bas ik jhalak mere diladaar kii mile
ye duniyaa...

Saharaa me.n aake bhii mujhako thikaanaa na milaa
gam ko bhuulaane kaa koii bahaanaa na milaa
dil tarase jis me.n pyaar ko kyaa samajhuu.n us sa.nsaar ko
ik jiitii baazii haarake mai.n dhuu.ndhuu.n bichha.de yaar ko
ye duniyaa...

Duur nigaaho.n se aa.nsuu bahaataa hai koii
kaise na jaauu.n mai.n mujhako bulaataa hai koii
yaa tuute dil ko jo.d do yaa saare ba.ndhan to.d do
ai parbat rastaa de mujhe ai kaa.nto.n daaman chho.d do
ye duniyaa.
http://www.youtube.com/watch?v=kHFyfcaBZqU

ವಿದಾಯ ಸಚಿನ್

ಯಾಕೋ ಮನಸ್ಸಿಂದು 
ತುಂಬಾ ಬೇಸರದಲಿ,
ಇನ್ನು ನೋಡಲಿಕ್ಕೆ 
ಇಲ್ಲ ಅವನ ಆ ಅಪ್ರತಿಮ ಆಟ
ಎಷ್ಟು ಮಹಾನ ಆಟಗಾರ 
ಆದರೆ ಮಾತಲ್ಲಿ 
ಎಷ್ಟೊಂದು ವಿನಯ
ಎಷ್ಟು ಸರಳತೆ 
ಕಣ್ಣಿಂದ ತನ್ನಂತಾನೆ 
ಕಣ್ಣೀರ ಸುರಿಮಳೆ 
ಹನಿ ಹನಿ
ಹನಿ ಹನಿ
ನಿಲ್ಲುವುದೇ ಇಲ್ಲ
ಯಾಕೋ ಹೃದಯ ಭಾರ ಭಾರ
ವಿದಾಯ ಸಚಿನ್
ಜಯ ಜಯ ಕ್ರಿಕೆಟ್ ಆಟ
ಬಾನಬಯಲನೇರಿತಲ್ಲಿ ನೋಡು ಹಾರುತ್ತಿದೆ ನಿನ್ನ ಬಾವುಟ

by ಹರೀಶ್ ಶೆಟ್ಟಿ, ಶಿರ್ವ

Thursday, November 14, 2013

ಹೃದಯ ಇಂದು ಕವಿಯಾಗಿದೆ

!!ಹೃದಯ ಇಂದು ಕವಿಯಾಗಿದೆ
ನೋವಿಂದು ಕವಿತೆಯಾಗಿದೆ
ನಿಶೆವೊಂದು ಹಾಡಾಗಿದೆ-೨
ಅನ್ಯರ ಕವನ ಕೇಳುವವರೇ
ಈ ಕಡೆಗೂ ಗಮನವಿರಲಿ!!

!!ಬಂದು ಸ್ವಲ್ಪ ನೋಡು
ನಿನಗಾಗಿ ನಾನು ಹೇಗೆ ಜೀವಿಸುತ್ತಿರುವೆ-೨
ನೀ ನೀಡಿದ ಗಾಯಗಳನ್ನೆಲ್ಲಾ
ಕಣ್ಣೀರ ದಾರದಿಂದ ಹೊಲಿಯುತ್ತಿರುವೆ
ಪ್ರೀತಿಯ ಸಭೆಯಲಿ
ನೋವು ನಿನ್ನ ಕೊಂಡೋಗಿ
ನಾನು ಜೂಜಾಡಿದೆ
ಜಗತ್ತಿಂದ ಗೆದ್ದೆ
ಆದರೆ ನಿನ್ನಿಂದ ಸೋತೆ
ನನ್ನಾಟ ಹೀಗಾಗಿದೆ!!

!!ನಾ ಮಾಡಿದ ಪ್ರೀತಿ
ಹೇಗೆಂದು ಹೇಳಲಿ
ಸಾಟಿಯಿಲ್ಲ ಅದಕ್ಯಾವುದೇ -೨
ಖಾಲಿ ದೀಪ ನಾನಗಿದೆ
ನಿನ್ನ ಜ್ವಾಲೆಯಲಿ ಉರಿದು
ಸೂರ್ಯ ಕಿರಣದಂತೆ ಹೊಳೆದೆ
ನನ್ನಿಂದಲೇ ಉಳಿದಿದೆ ನಿಷ್ಠೆ ಹಾಗು
ನನ್ನಿಂದಲೇ ಈ ಸಭೆ ಯೌವನವಾಗಿದೆ
ಒಂದು ವೇಳೆ ನಾನಿಲ್ಲದಿದ್ದರೆ
ಅತ್ತು ಅತ್ತು ಜಗವೆಲ್ಲ
ಹುಡುಕುತ್ತಿರುವರು ನನ್ನ ಗುರುತು!!

!!ಈ ಪ್ರೀತಿ ಯಾವುದೇ ಆಟಿಕೆಯಲ್ಲ
ಪ್ರತಿಯೊಬ್ಬರೂ ಬಂದು ಖರೀದಿಸಲು-೨
ನನ್ನಂತೆ ಜೀವನ ಪರ್ಯಂತ
ನೊಂದು ಬೆಂದು
ಮತ್ತೆ ಬನ್ನಿ ಅದರ ಸನಿಹ
ನಾನೊಬ್ಬ ಪಯಣಿಗ
ಯಾವುದೇ ಪಯಣವಿರಲಿ
ನಾನೇಗೋ ಸಾಗಿ ಹೋಗುವೆ
ಆದರೆ ನಾ ಕಟ್ಟಿದ ಈ ಬಾಜಿಯಲ್ಲಿ
ಜಯ ಸಾಧಿಸಿ ಬರುವೆ
ಜಯ ಸಾಧಿಸಿ ಬರುವೆ
ಜಯ ಸಾಧಿಸಿ ಬರುವೆ !!

ಮೂಲ : ನೀರಜ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಎಸ್ .ಡಿ.ಬರ್ಮನ್
ಚಿತ್ರ : ಗ್ಯಾಂಬ್ಲಾರ್

Dil Aaj Shayar Hai, Gum Aaj Nagma Hai, Shab Yeh Ghazal Hai Sanam
Dil Aaj Shayar Hai, Gum Aaj Nagma Hai, Shab Yeh Ghazal Hai Sanam
Gairon Ke Sheron Ko O Sunnewale, Ho Is Taraf Bhi Karam

Aake Zara Dekh To Teri Khatir, Hum Kis Tarah Se Jiye
Aake Zara Dekh To Teri Khatir, Hum Kis Tarah Se Jiye
Aansoo Ke Dhage Se Seete Rahe Hum Jo Jakhm Tune Diye
Chahat Ki Mehfil Mein Gum Tera Lekar Kismat Se Khela Juwa
Duniya Se Jeete, Par Tujhse Haare, Yun Khel Apna Hua

Hai Pyaar Humne Kiya Jis Tarah Se, Uska Na Koi Jawab
Hai Pyaar Humne Kiya Jis Tarah Se, Uska Na Koi Jawab
Zarraat Hai Lekin Teri Lau Mein Jalkar, Hum Ban Gaye Aaftaab
Hum Se Hai Zinda Wafa Aur Humhi Se Hai Teri Mehfil Jawan
Hum Jab Na Honge To Ro Ro Ke Duniya Dhundhegi Mere Nishan

Ye Pyaar Koi Khilauna Nahin Hai, Har Koi Le Jo Kharid
Ye Pyaar Koi Khilauna Nahin Hai, Har Koi Le Jo Kharid
Meri Tarah Zindagi Bhar Tadap Lo, Phir Aana Uske Karib
Hum To Musafir Hain, Koi Safar Ho, Hum To Guzar Jayenge Hi
Lekin Lagaya Hai Jo Danw Humne, Woh Jeetkar Aayenge Hi
Woh Jeetkar Aayenge Hi
Woh Jeetkar Aayenge Hi
www.youtube.com/watch?v=vTQ_qbsz7Dw

Wednesday, November 13, 2013

ನೆನಪು ಅಳಿಸಲಾಗುವುದಿಲ್ಲ

ನೆನಪು ಅಳಿಸಲಾಗುವುದಿಲ್ಲ
ಕಳೆದೋದ ದಿನಗಳ
ಕಳೆದೋಗಿ
ಹಿಂತಿರುಗಿ ಬರದ
ಆ ದಿನಗಳನ್ನು,
ಹೃದಯ ಏಕೆ ಕರೆಯುತ್ತಿದೆ
ಹೃದಯ ಏಕೆ ಕರೆಯುತ್ತಿದೆ....

ದಿನವೊಂದು ಗಿಣಿಯಾಗಿದ್ದರೆ
ನಾನು ಪಂಜರದಲ್ಲಿಡುತ್ತಿದ್ದೆ -೨
ಆರೈಕೆಯಿಂದ ನೋಡಿಕೊಂಡು-೨
ಮುತ್ತಿನ ಆಹಾರ ನೀಡುತ್ತಿದ್ದೆ
ಎದೆಯಿಂದಪ್ಪಿಕೊಂಡಿರುತ್ತಿದ್ದೆ
ನೆನಪು ಅಳಿಸಲಾಗುವುದಿಲ್ಲ.....

ಭಾವಚಿತ್ರ ಅವಳ ಅಡಗಿಸಿ
ಎಲ್ಲಾದರೂ ಇಡುತ್ತಿದ್ದೆ-೨
ಮನದಲ್ಲಿ ನೆಲೆಸಿದ ಆ ರೂಪ -೨
ಆದರೆ ಅಳಿಸಿಯೂ ಅಳಿಸಲಾಗುವುದಿಲ್ಲ
ಹೇಳಲಿಕ್ಕೆ ಅವಳು ನನ್ನವಳಲ್ಲ
ನೆನಪು ಅಳಿಸಲಾಗುವುದಿಲ್ಲ.....

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ದಿಲ್ ಏಕ ಮಂದಿರ್

याद न जाए, बीते दिनों की
जा के न आये जो दिन
दिल क्यूँ बुलाए
उन्हें, दिल क्यों बुलाए

दिन जो पखेरू होते, पिंजरे में मैं रख लेता
पालता उनको जतन से, मोती के दाने देता
सीने से रहता लगाए
याद न जाए...

तस्वीर उनकी छुपा के, रख दूँ जहाँ जी चाहे
मन में बसी ये मूरत, लेकिन मिटी न मिटाए
कहने को हैं वो पराए
याद न जाए...
www.youtube.com/watch?v=2On9ix8wy9w

Tuesday, November 12, 2013

ದಿನ ಹೇಗೋ ಕಳೆದೋಗುತ್ತದೆ

ದಿನ ಹೇಗೋ ಕಳೆದೋಗುತ್ತದೆ
ರಾತ್ರಿ ಕಳೆಯಲಾಗುವುದಿಲ್ಲ
ನೀನಂತೂ ಬರುವುದಿಲ್ಲ
ಸತಾಯಿಸಿ ಹೋಗುತ್ತದೆ ನಿನ್ನ ನೆನಪೆಲ್ಲ
ದಿನ....

ಪ್ರೀತಿಯಲಿ ಅವಳ
ಬಿಟ್ಟೆ ಜಗವೆಲ್ಲ
ಹಾಗು ಅಪಕಿರ್ತಿಗೊಳಗಾದೆ
ಅವಳ ಕಾರಣದಿಂದಲೇ
ಇಂದಿದ್ದೇನೆ ಈ ದುಸ್ಥಿತಿಯಲಿ
ವೇದನೆಯಿಂದ ಉರಿಯುತ್ತಿದೆ ಹೃದಯವೆಲ್ಲ
ದಿನ....

ಹೀಗೆಯೇ ತುಂತುರು ಮಳೆ
ಹೀಗೆಯೇ ಹನಿ ಹನಿ
ಹೀಗೆಯೇ ಇತ್ತು ಆ ಮುಂಗಾರು ಮಳೆ
ನಮ್ಮನ್ನೇ ಮರೆತು ಹಾಗು ಜಗತ್ತಿಂದ ಅಪರಿಚಿತ
ನಾವಿಬ್ಬರಿದ್ದೇವು ಜೊತೆಯಲಿ
ಮತ್ತೆ ಆ ಮುಂಗಾರು ಮಳೆ ಯಾಕೆ ಹಿಂತಿರುಗಿ ಬರುವುದಿಲ್ಲ
ದಿನ....

ಹೃದಯದ ಸನಿಹವಾಗಿರುವೆ
ಆದರೆ ದೂರ ನೀನೆಷ್ಟು
ನೀನು ನನ್ನಿಂದ ನಾನು ಹೃದಯದಿಂದ
ಅಸಹಾಯಕರಾಗಿದ್ದೇವೆ ನಾವೆಷ್ಟು
ಈ ಸ್ಥಿತಿಯಲ್ಲಿ ಹೇಗೆ ಮನವೊಲಿಸುವುದೆಲ್ಲ
ದಿನ....

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಎಸ್ .ಡಿ.ಬರ್ಮನ್
ಚಿತ್ರ : ಗೈಡ್

दिन ढल जाए, हाय रात ना जाए
तू तो ना आये, तेरी याद सताए

प्यार में जिनके सब जग छोड़ा, और हुए बदनाम
उनके ही हाथो हाल हुआ ये, बैठे हैं दिल को थाम
अपने कभी थे, अब हैं पराये

ऐसी ही रिमझीम, ऐसी पुहारे, ऐसी ही थी बरसात
खुद से जुदा और जग से पराये, हम दोनों थे साथ
फिर से वो सावन अब क्यों ना आये?

दिल के मेरे पास हो इतने, फिर भी हो कितनी दूर
तुम मुझको से, मैं दिल से परेशान, दोनों हैं मजबूर
ऐसे में किस को कौन मनाये?
www.youtube.com/watch?v=-7YUAbr4RCo‎

Saturday, November 9, 2013

ಬಾ ಇನ್ನೊಂದು ಸಲ

ಬಾ ಇನ್ನೊಂದು ಸಲ
ಅಪರಿಚಿತರಾಗೋಣ ನಾವಿಬ್ಬರು-೨

ನಾನಿನ್ನು ನಿನ್ನಿಂದ್ಯಾವುದೇ
ಇಡಲಾರೆ ಕರುಣೆಯ ಆಸೆಯನ್ನು
ನೀನೂ ನನ್ನ ಕಡೆ ಬೀರದಿರು
ವಂಚಿಸುವ ದೃಷ್ಟಿಯನ್ನು
ನನ್ನ ಹೃದಯ ಮಿಡಿತದ ಕಂಪನೆ
ಕಂಡುಬಾರದು ನನ್ನ ಮಾತಿನಲಿ
ನಿನ್ನ ಕಣ್ಣು ಸಹ
ನಿನ್ನ ಯಾತನೆಯನ್ನು
ಬಹಿರಂಗಪಡಿಸದಿರಲಿ
ಬಾ ಇನ್ನೊಂದು ಸಲ ....

ನಿನ್ನನ್ನೂ ಯಾವುದೇ ತೊಡಕು
ನಿಲ್ಲಿಸುತ್ತದೆ ಮುನ್ನಡೆಯಲು
ನನಗೂ ಜಗವೆಲ್ಲ ಹೇಳುತ್ತಾರೆ
ನಾನು ಮುಖವಾಡ ಧರಿಸಿದ್ದೇನೆಯೆಂದು
ನನ್ನ ಅಪಕೀರ್ತಯೇ
ನನ್ನ ಸಹ ಪ್ರವಾಸಿ ನನ್ನ ಗಮ್ಯದ
ನಿನ್ನೊಟ್ಟಿಗೆ ಸಹ
ನಿನ್ನ ಕಳೆದ ರಾತ್ರಿಯ ನೆರಳಿದೆ
ಬಾ ಇನ್ನೊಂದು ಸಲ ....

ಪರಿಚಯ ರೋಗವಾದರೆ
ಅದನ್ನು ಮರೆಯುವುದೇ ಉತ್ತಮ
ಸಂಬಂಧ ಭಾರವಾದರೆ
ಅದನ್ನು ಮುರಿಯುವುದೇ ಚೆನ್ನ
ಕಥೆಗೆ ಒಂದು ಅಂತಿಮ ರೂಪ
ನೀಡಲು ಅಸಾಧ್ಯವಾದರೆ
ಅದನ್ನು ಒಂದು ಸುಂದರ ತಿರುವಿನಲ್ಲಿ
ಬಿಟ್ಟು ಬಿಡುವುದೇ ಉತ್ತಮ
ಬಾ ಇನ್ನೊಂದು ಸಲ....

ಮೂಲ : ಸಾಹಿರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮಹೇಂದ್ರ ಕಪೂರ್
ಸಂಗೀತ : ರವಿ
ಚಿತ್ರ : ಗುಮರಾಹ

Chalo Ek Baar Phir Se, Ajnabi Ban Jaye Ham Dono -2

Na Main Tumse Koi Ummeed Rakhoon Dilnavaazi Ki
Na Tum Meri Taraf Dekho Galat Andaaz Nazaron Se
Na Mere Dil Ki Dhadkan Ladkhadaaye Meri Baaton Mein
Na Zaahir Ho Tumhaari Kashm-Kash Ka Raaz Nazaron Se
Chalo Ek Baar Phir Se..

Tumhen Bhi Koi Uljhan Rokti Hai Peshkadmi Se
Mujhe Bhi Log Kehte Hain, Ki Yeh Jalve Paraaye Hain
Mere Hamraah Bhi Rusvaaiyaan Hain Mere Maajhi Ki -2
Tumhaare Saath Bhi Guzri Hui Raaton Ke Saaye Hain
Chalo Ek Baar Phir Se..

Taarruf Rog Ho Jaaye To Usko Bhoolnaa Behtar
Taalluk Bojh Ban Jaaye To Usko Todnaa Achchha
Voh Afsaana Jise Anjaam Tak Laana Na Ho Mumkin -2
Use Ek Khoobsoorat Mod Dekar Chhodna Achchha
Chalo Ek Baar Phir Se..
www.youtube.com/watch?v=cE5q9kst-Zc

Thursday, November 7, 2013

ಮೌನದ ಮರೆಯಲ್ಲಿ

ಮೌನದ ಮರೆಯಲ್ಲಿ  
ಮಾತುಗಳೆಷ್ಟು 
__________
ಕಣ್ಣು ಕಾಣುವ 
ಕುರುಡರಿಗೆ 
ಸುಂದರ ನೋಟಗಳೆಲ್ಲ 
ಮಿಥ್ಯಾ 
__________
ಎರಡು ಕಣ್ಣು 
ಸಾವಿರಾರು ಕನಸು 
__________
ಮನಸ್ಸ
ಕಾರ್ಖಾನೆಯಲಿ
ಬಯಕೆಗಳ
ಉತ್ಪಾದನೆ
__________
ಉತ್ಸವ ಬಂತು ಹೋಯಿತು
ಮನಸ್ಸಲ್ಲಿದ್ದ ಬಯಕೆ
ಮನಸ್ಸಲ್ಲಿಯೇ ಉಳಿಯಿತು
___________
ಗಾಳಿಪಟ
ತುಂಡಾಗಿ ಎಲ್ಲೊ ಹಾರಿ ಹೋಯಿತು
ಬಿಟ್ಟು ಕಣ್ಣಲ್ಲೊಂದು
ಕಣ್ಣೀರ ಹನಿ

by ಹರೀಶ್ ಶೆಟ್ಟಿ,ಶಿರ್ವ

ನಿನಗೆ ನನ್ನ ಪರಿಚಯವಿಲ್ಲ

!!ನಿನಗೆ ನನ್ನ ಪರಿಚಯವಿಲ್ಲ
ನನಗೂ ನಿನ್ನ ಪರಿಚಯವಿಲ್ಲ
ಆದರೂ ಅನಿಸುತ್ತಿದೆ
ನನಗೆ ಹೀಗೆ 
ನನ್ನೊಲವು ಸಿಕ್ಕಿದಂತೆ!!

!!ಈ ನಿಸರ್ಗ
ಈ ರಾತ್ರಿ ಮೌನವಾಗಿದೆ
ಎರಡು ಅಧರಗಳ 
ಮಾತು ಮೌನವಾಗಿದೆ
ನೀರವತೆ ಹೇಳಲಾರಂಭಿಸಿದೆ ಕತೆಯೆಲ್ಲ-೨
ದೃಷ್ಟಿ ಆಗಿದೆ
ಹೃದಯದ ನುಡಿಗಳೆಲ್ಲ!!
ನಿನಗೆ ನನ್ನ....

!!ಪ್ರೀತಿಯ
ತಿರುವಿನಲ್ಲಿ ನಾವು
ಸಿಕ್ಕಿ ಬಿಟ್ಟು
ಎಲ್ಲರನ್ನು ಹಿಂದೆ ನಾವು
ಮಿಡಿಯುವ ಹೃದಯಗಳ ಈ ತಂಡಗಳೊಂದಿಗೆ-೨
ತಲುಪುವುದು
ನಾವಿಬ್ಬರು ಅದೆಲ್ಲಿಗೆ?!!
ನಿನಗೆ ನನ್ನ....

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಹೇಮಂತ್ ಕುಮಾರ್, ಸುಮನ್ ಕಲ್ಯಾಣಪುರಿ
ಚಿತ್ರ : ಬಾತ್ ಎಕ್ ರಾತ್ ಕಿ

ना तुम हमे जानो, ना हम तुम्हे जाने
मगर लगता हैं, कुछ ऐसा मेरा हमदम मिल गया

ये मौसम ये रात चुप हैं
दो होठों की बात चुप हैं
खामोशी सुनाने लगी हैं दास्ताँ
नजर बन गयी हैं, दिल की जुबान

मोहब्बत के मोड़ पे हम
मिले सब को छोड़ के हम
धड़कते दिलों का लेके ये कारवां
के जायेंगे दोनों जाने कहा?
http://www.youtube.com/watch?v=hGOkuBTtBu0

Wednesday, November 6, 2013

ಎರಡು ಕಂಗಳಲ್ಲಿ ಕಣ್ಣೀರು ತುಂಬಿದೆ

!!ಎರಡು ಕಂಗಳಲ್ಲಿ ಕಣ್ಣೀರು ತುಂಬಿದೆ
ನಿದ್ರೆ ಹೊಂದಿಕೊಳ್ಳುವುದು ಹೇಗೆ!!-೨

!!ಮಗ್ನ ಮಗ್ನ ಕಣ್ಣಲಿ
ನೆರಳು ಕನಸಿನದ್ದು
ರಾತ್ರಿಯಲಿ ನನ್ನದಾಗಿದ್ದು
ಹಗಲಲಿ ಮರೆಯಾಗುವುದು-೨
ಹೇಗೆ ಕಣ್ಣಲ್ಲಿ
ನಿದ್ರೆ ಹೊಂದಿಕೊಳ್ಳುವುದು!!
ಎರಡು ಕಂಗಳಲ್ಲಿ.....೨

!!ಸುಳ್ಳು ನಿನ್ನ ವಚನದಲಿ
ವರುಷಗಳೆಷ್ಟು ಹೋಯಿತು ಕಳೆದು
ಜೀವನ ಕಳೆದೋಯಿತು
ಈ ರಾತ್ರಿಯೂ ಹೋಗಲಿ ಕಳೆದು-೨
ಹೇಗೆ ಕಣ್ಣಲ್ಲಿ
ನಿದ್ರೆ ಹೊಂದಿಕೊಳ್ಳುವುದು!!
ಎರಡು ಕಂಗಳಲ್ಲಿ.....೨

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಆರ್. ಡೀ.ಬರ್ಮನ್
ಚಿತ್ರ : ಕುಶ್ ಬೂ
do naino mein aansoo bhare hain, nindeeyaa kaise samaaye

doobee doobee aakhon mein, sapanon ke saaye
raatabhar apane hain, din mein paraaye
kaise nainon mein nindeeyaa samaaye

zoothhe tere waadon pe baras bitaaye
jindagee to kaatee, ye raat kat jaaye
kaise nainon mein nindeeyaa samaaye
www.youtube.com/watch?v=o-kZK46eJKE

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...