Tuesday, August 30, 2011

ಗುಲಾಬಿ ಹೂವಿನ ಮುಳ್ಳು

ಕೇಳಿದೆ ನಾ ಗುಲಾಬಿ ಹೂವಿನ ಮುಳ್ಳಿಗೆ
"ಎಷ್ಟು ಸುಂದರ ಈ ಸುಹಾಸಿತ ಗುಲಾಬಿ ಹೂವು
ಆದರೆ ನೀ ಕೊಡುವಿ ಎಲ್ಲರಿಗೆ ನೋವು   
ಏನು ಗುಲಾಬಿ ಹೂವು ಹಾಗು ನಿನ್ನ ಸಂಬಂದ
ಏಕೆ ನಿನಗಿಲ್ಲ ಗುಲಾಬಿ ಹೂವಿನ ಅಂದ ಚೆಂದ
ಏನು ನಿನ್ನ ಈ ಆಟ
ಯಾಕೆ ನಿನ್ನ ಈ ಕಾಟ
ನಿನ್ನಿಂದ ಕಷ್ಟ ಮಾತ್ರ  
ಇಲ್ಲಿ ಏನು ನಿನ್ನ ಪಾತ್ರ"
  
ಗುಲಾಬಿ ಹೂವಿನ ಮುಳ್ಳು ಹೇಳಿತು ನಕ್ಕು
"ನನಗೆ ಬೇಡ ಅಂದ ಚೆಂದ
ಆದರೆ ನಿಮಗೆ ಒಂದು ಜ್ಞಾನ ನನ್ನಿಂದ
ನನ್ನ ಇಲ್ಲಿ ಮುಖ್ಯ ಪಾತ್ರ
ಹಲವು ಪ್ರಮಾಣ  ನನ್ನತ್ರ
ಗುಲಾಬಿ ಹೂವು ಇಲ್ಲದೆ ನಾನಿಲ್ಲ
ನಾನಿಲ್ಲದೆ ಗುಲಾಬಿ ಹೂವು ಇಲ್ಲ 
ಜೀವನ ಸುಖ ದುಃಖದ ಸಂಗಮ
ಕೂಡಿ ಬಾಳುವುದೇ ಉತ್ತಮ
ಜೀವನದಲ್ಲಿ ಬೇಕು ನೋವಿನ ಅನುಭವ
ಆಗಲೇ ಜೀವನವನ್ನು ಗೆಲ್ಲಲು ಸಂಭವ" 
by ಹರೀಶ್ ಶೆಟ್ಟಿ, ಶಿರ್ವ

Monday, August 29, 2011

ನಾನು ಕವಿ ಅಲ್ಲ

ನಾನು ಕವಿ ಅಲ್ಲ 
ಕೇವಲ...
ನನ್ನ ಪೆನ್ನಿನ
ಶಾಯಿಯಿಂದ  
ನನ್ನ
ಭಾವನೆಗಳನ್ನು 
ಕಾಗದದಲ್ಲಿ ಚೆಲ್ಲಿದು.......
by  ಹರೀಶ್ ಶೆಟ್ಟಿ, ಶಿರ್ವ  

ಬಂದೆ ನಾ ಪರದೇಶ

ಬಂದೆ ನಾ ಪರದೇಶ
ಬೇರೆ ಬೇರೆ ವೇಷ
ಎಲ್ಲವೂ ನವೀನ, ನವೀನ
ಜನರು ಭಿನ್ನ ಭಿನ್ನ

ದೊಡ್ಡ ದೊಡ್ಡ ಕಟ್ಟಡಗಳು    
ಬಣ್ಣ ಬಣ್ಣದ ಇಮಾರತ,ಬಂಗಲೆಗಳು  
ಸುಂದರ ಸುಂದರ ರಸ್ತೆಗಳು
ಆಶ್ಚರ್ಯದಿಂದ ನೋಡುತ್ತಿತ್ತು ನನ್ನ ಕಂಗಳು

ವೀಸಾ ಕೊಟ್ಟಿದ್ದ ಜನ ಬಂದಿದ
ದೊಡ್ಡ ದೊಡ್ಡ ಮಾತಾನಾಡಿದ
ಕಾರಲ್ಲಿ ಅಲ್ಲಿ ಇಲ್ಲಿ ತಿರುಗಿಸಿದ
ಪರದೇಶವನ್ನು ಕೊಂಡಾಡಿದ

ಕರೆದು ಕೊಂಡು ಬಂದ ಚಿಕ್ಕ ಕೋಣೆಯಲಿ
ಬೇರೆ ಮೂರು ಜನ ಇದ್ದರು ಆ ಕೋಣೆಯಲಿ
ಇಟ್ಟ ನನ್ನ ಸಾಮಾನು ಚಿಕ್ಕ ಹಾಸಿಗೆಯಲಿ
ಕೊಟ್ಟ ಒಟ್ಟಿಗೆ ಒಂದು ಚದ್ದರ್ ಜೊತೆಯಲಿ

ಹೇಳಿದ ,ಇದೇ ನಿನ್ನ ಕೋಣೆ
ನಿನ್ನ ಸಾಮಾನಿನ ನೀನೇ ಹೊಣೆ
ಇವತ್ತು ವಿಶ್ರಾಂತಿ ನೀ ಮಾಡೆಂದ
ಬರಬೇಕು ಕೆಲಸಕ್ಕೆ ನೀ ನಾಳೆಯಿಂದ 

ನನ್ನ ಮನಸ್ಸು ಅಲ್ಲೋಲ ಕಲ್ಲೋಲವಾಯಿತು
ಸ್ವದೇಶ ಹಾಗು ಮನೆಯವರ ನೆನಪಾಯಿತು
ಸ್ವರ್ಗವನ್ನು ಹುಡುಕುತ್ತ ಜೀವನ ನರಕಕ್ಕೆ ಶರಣಾಯಿತು 
ನನ್ನ ದೇಶದ ದುಃಖವೇ ತುಂಬಾ ಚೆನ್ನಾಗಿತು ಎಂದೆನಿಸಿತು
ಬಿಕ್ಕಿ ಬಿಕ್ಕಿ ಅತ್ತೆ ನಾನು, ಮೆಲ್ಲನೇ ನಿದ್ರೆ ಅವರಿಸಿತು
by  ಹರೀಶ್ ಶೆಟ್ಟಿ, ಶಿರ್ವ



Sunday, August 28, 2011

ವೀಸಾ ಬಂದಿತು

ವೀಸಾ ಬಂದಿತು
ಕನಸು ವಾಸ್ತವ ಹಂತಕ್ಕೆ ಸೇರಿತು
ಮನದಲಿ ಒಂದು ಭಯ ಮೂಡಿತು
ದೂರ ಹೋಗುವೆ ಇನ್ನೂ ಎಂದು ಜೀವ ನಡುಗಿತು 

ಎಲ್ಲರಿಂದ ಬೇಟಿ ಮಾಡಿ ಆಯಿತು
ಔತಣ ,ಉಪಚಾರ ಆಯಿತು
ಬ್ಯಾಗ್ ಎಲ್ಲ ತುಂಬಿಸಿ ಆಯಿತು
ಹೋಗುವ ಸಮಯ ಹತ್ತಿರವಾಯಿತು

ಅವಳ ಮುಖ ಬಾಡಿತು
ಹತಾಶೆಯಿಂದ ಕೂಡಿತು
ಹೃದಯ ಅವಳ ಅಳುತ್ತಿತ್ತು
ಕಣ್ಣಲಿ ನೀರು ತುಂಬಿತು 
ಮಗ ಅಲ್ಲೇ ಕೂತಿದ್ದ
ಆಟ ಓಟಗಳ ಮರೆತಿದ್ದ
ಕಣ್ಣಿರನ್ನು ಅವಿತಿದ್ದ
ನನ್ನನ್ನೇ ನೋಡುತ್ತಿದ್ದ

ಆ ಕಡೆ ಕನಸಿನ ಸಾಗರ
ಈ ಕಡೆ ಬಿಟ್ಟು ಹೋಗುತ್ತಿದ್ದೆ ಸಂಸಾರ
ಕಾಣುವೆನೇ ಇನ್ನು ಮನೆಯ ದ್ವಾರ ?
ಹೆಚ್ಚಾಯಿತು ಕನಸಿಗಿಂತ ಕಣ್ಣಿರ ಭಾರ
by ಹರೀಶ್ ಶೆಟ್ಟಿ, ಶಿರ್ವ

Saturday, August 27, 2011

ಬರಬೇಡ

ಬರಬೇಡ ಪುನಃ ನನ್ನ ಜೀವನವ ಮರಳಿ
ನನ್ನ ಜೀವನ ಈಗ ಸ್ವರ ಇಲ್ಲದ ಮುರಳಿ
ಬತ್ತಿ ಹೋಗಿದೆ ಜೀವನ ನಿರಾಸೆಯ ಪಥದಲಿ
ಹೃದಯ ತೇಲಿ ಹೋಗಿದೆ ದುಃಖದ ಸಾಗರದಲಿ
by ಹರೀಶ್ ಶೆಟ್ಟಿ, ಶಿರ್ವ

Friday, August 26, 2011

ಹೊಸ ಬೆಳಕು

ನಡೆಯುತ್ತಿದ್ದೆ ಹೀಗೆಯೇ ಹಾದಿಯಲಿ  
ತನ್ನದೇ ದೀರ್ಘ ಯೋಚನೆಯಲಿ
ಹಲವು ವಿಚಾರಗಳು ಮನದಲಿ

ಸುಪ್ತವಾದ ಕಾರ್ಯಗಳು
ಕೆಲಸದ ಸಮಸ್ಯೆಗಳು
ಮನೆಯ ಕಲಹಗಳು
ತುಂಡಾದ ಸಂಬಂದಗಳು

ಹಣದ ಅಭಾವಗಳು
ಜೂಜಿನ ಸೋಲುಗಳು
ತೀರಿಸುವ ಸಾಲಗಳು
ಸಿಕ್ಕುವ ಬೆದರಿಕೆಗಳು 

ಜೀವನದ ಸವಾಲುಗಳು
ಅನೇಕ ಕಷ್ಟಗಳು
ನಿರಾಸೆಯ ಅಲೆಗಳು
ಕಾಣದ ತಾಣಗಳು

ನಡೆಯುತ್ತಲೇ ಹೋಗುತ್ತಿದ್ದೆ
ವಿಚಾರಗಳ ಮಂಥನದಲ್ಲಿ
ಕಂಡೆ ಚಿಕ್ಕದೊಂದು ಕಲ್ಲು ಹಾದಿಯಲ್ಲಿ
ಎತ್ತಿ ಕೊಂಡೆ ಕೈಯಲ್ಲಿ
ಕಲ್ಲು ಇತ್ತು ದೇವ ಗಣೇಶನ ಆಕಾರದಲ್ಲಿ

ಕಲ್ಲಲ್ಲಿ ಅದೃಷ್ಟ ಕಂಡಿತು  
ಆಸೆ ಒಂದು ಚಿಗುರಿತು
ಮನದ ಹೂವು ಅರಳಿತು
ಜೀವನದಲ್ಲಿ ಹೊಸ ಬೆಳಕಾಯಿತು
by  ಹರೀಶ್ ಶೆಟ್ಟಿ, ಶಿರ್ವ

Thursday, August 25, 2011

ಹುಣಸೆ ಮರ ಮತ್ತು ನದಿ

ದಟ್ಟ ಕಾಡಿನಲ್ಲಿ
ಪುಟ್ಟ ಹರಿಯುವ ನದಿ
ನದಿಯ ತಟದಲ್ಲಿ
ಒಂದು ಹುಣಸೆ  ಮರ

ಹುಣಸೆ ಮರದಲ್ಲಿ ತುಂಬಾ ಹಣ್ಣು
ಅದರ ಹಣ್ಣು ಬಹಳ ಹುಳಿ
ನದಿಯ ನೀರು ಯಾವಾಗಲು ಸಿಹಿ ಸಿಹಿ

ಹುಣಸೆ ಮರಕ್ಕೆ ಬಂತು ದುಷ್ಟ ವಿಚಾರ 
ಬೀಳಿಸುವೆ  ನನ್ನ ಹಣ್ಣನ್ನು
ನದಿಯ ಸಿಹಿ ನೀರನ್ನು ಮಾಡುವೆ ಹುಳಿ

ಹರಿಯುವ ನದಿಗೆ
ಇದರ ಇರಲಿಲ್ಲ ಜ್ಞಾತ
ಇಷ್ಟ ಅದಕ್ಕೆ ತನ್ನದೇ ಪ್ರವಾಸ

ಹುಣಸೆ ಮರ ಹಣ್ಣನ್ನು ಬೀಳಿಸುತ್ತಲೇ ಇತ್ತು
ನೀರು ಹುಳಿ ಆಗುವುದೆಂದು ಕಾಯುತ್ತಲೇ ಇತ್ತು
ನದಿ ಶಾಂತತೆಯಿಂದ ಹರಿಯುತ್ತಲೇ ಇತ್ತು
ನದಿಯ ನೀರು ಸದಾ ಸಿಹಿಯೇ ಆಗಿತ್ತು
by  ಹರೀಶ್ ಶೆಟ್ಟಿ, ಶಿರ್ವ

Wednesday, August 24, 2011

ನನಗೆ ಒಬ್ಬನೇ ಬಿಡಿ


ನನಗೆ ಒಬ್ಬನೇ ಬಿಡಿ
ಈ ನಿರ್ಜನ ಭೂಮಿಯಲ್ಲಿ
ಮುಳ್ಳಿನ ಗುಂಪಿನಲ್ಲಿ
ನನಗೆ ಯಾವುದೇ ಸುಖ ಬೇಡ
ಯಾರಿಗೂ ನನ್ನ ಚಿಂತೆ ಬೇಡ
ಈ ಘೋರ ಯಾತನೆಯ ಅನುಭವಿಸಲು ಕೊಡಿ

ನನಗೆ ಒಬ್ಬನೇ ಬಿಡಿ
ಸಿಕ್ಕಿ ಬಿದ್ದಿದೇನೆ ಸೋಲಿನ ಜಾಲದಲ್ಲಿ
ಮುಳುಗಿದ್ದೇನೆ ಪ್ರೇಮದ ಕಡಲಲ್ಲಿ
ಇನ್ನು ಗೆಲುವಿನ ಆಸೆ  ಬೇಡ
ಪ್ರೇಮದ ಉಪಕಾರ ಬೇಡ
ನನಗೆ ದುಃಖದ ಕಡಲಲ್ಲಿ ತೇಲಲು ಬಿಡಿ

ನನಗೆ ಒಬ್ಬನೇ ಬಿಡಿ
ಅವರ ಆಧಾರ ಸತ್ಕಾರ ಬೇಡ
ವ್ಯರ್ಥದ ಉಪಚಾರ ಬೇಡ
ನನಗೆ ವ್ಯರ್ಥದ ಹೊಗಳುವಿಕೆ ಬೇಡ
ನನಗೆ ಪ್ರಶಸ್ತಿಗಳು ಬೇಡ
ನನಗೆ ನನ್ನದೇ ಜಗದಲ್ಲಿ ಇರಲು ಕೊಡಿ
ನನಗೆ ಒಬ್ಬನೇ ಬಿಡಿ
by ಹರೀಶ್ ಶೆಟ್ಟಿ, ಶಿರ್ವ

Tuesday, August 23, 2011

ಜೀವನ

ಕೇಳಿದಳು ಅವಳು ನನ್ನನ್ನು
"ನೀ
ಪ್ರಿತಿಸುವೇಯ ನನ್ನನ್ನು
ಅಥವಾ
ಪ್ರಿತಿಸುವೇಯ ಜೀವನವನ್ನು?"
ನಾ
ಹೇಳಿದೆ
"ಜೀವನವನ್ನು"
ಅವಳು
ತಿಳಿಯದೆ
ಹೊರಟು  ಹೋದಳು
"ಅವಳೇ ನನ್ನ ಜೀವನವೆಂದು "
by  ಹರೀಶ್ ಶೆಟ್ಟಿ, ಶಿರ್ವ

ಸಖೀ

ಸಖೀ......

ಸಮಯ ಕಳೆದಂತೆ
ನಾವೂ ಅಲ್ಲಿ ಇಲ್ಲಿ ,
ಯಾರಿಗೆ ಗೊತ್ತು
ನಾನೆಲ್ಲಿ ನೀನೆಲ್ಲಿ ,
ನಾನು ನಿನ್ನ ನೆರಳೆಂದು
ಮರೆಯದಿರು ಪ್ರಿಯೇ,
ಕಾಣುವೇ ನನ್ನನ್ನು ನೀ
ನಿನ್ನ ಏಕಾಂತದಲ್ಲಿ ......

by  ಹರೀಶ್ ಶೆಟ್ಟಿ, ಶಿರ್ವ

Monday, August 22, 2011

ಹುಡುಕುತ್ತಿದ್ದೇನೆ ನಾನು?

ಹುಡುಕುತ್ತಿದ್ದೇನೆ ನಾನು.....!

ಏಕಾಂತ ರಸ್ತೆಯಲ್ಲಿ
ತುಂಡು ತುಂಡಾದ
ಕನಸನ್ನು.....!

ಪ್ರೀತಿಯ ಕಡಲಲ್ಲಿ
ತೇಲಿ ಹೋದ
ಹೃದಯವನ್ನು.....!

ಆಕಾಶದ ಮರೆಯಲ್ಲಿ
ಕಣ್ಣು ಮುಚ್ಚಾಲೆ ಆಡುವ
ಮಿನುಗದ ನಕ್ಷತ್ರಗಳನ್ನು.....!

ಕತ್ತಲೆಯ ಮಡಿಲಲ್ಲಿ
ಕಿಂಚಿತ ಪ್ರಕಾಶಿಸುವ
ಪುಟ್ಟ ಚಂದ್ರನನ್ನು.....!

ಜೀವನ ಪಥದಲ್ಲಿ
ಎಂದೂ ಸಿಗದ
ನನ್ನ ತಾಣವನ್ನು......!

ಜನರ ಗುಂಪಲ್ಲಿ
ಮರೆಯಾಗಿದ  
ನನ್ನ ಪರಿಚಯವನ್ನು.......!

ಹುಡುಕುತ್ತಿದ್ದೇನೆ ನಾನು......!
ಏಕೆ ಹುಡುಕುತ್ತಿದ್ದೇನೆ ನಾನು?.....!
ಕಳೆದ ಜೀವನ ಪುನಃ ಸಿಗುವುದೇ?.....!
ಹುಡುಕುತ್ತಿದ್ದೇನೆ ನನ್ನನ್ನೇ ನಾನು.....!
by ಹರೀಶ್ ಶೆಟ್ಟಿ, ಶಿರ್ವ

Sunday, August 21, 2011

ವಿರಹ

ಎಲ್ಲಿದ್ದಿ  ನೀ "ಕೃಷ್ಣ "
ಕಾದು ಕಾದು ಸೋತು ಹೋದೆ "ಕೃಷ್ಣ "
ನಿನ್ನ ರಾಧೆ ಬದುಕಲಾರಳು "ಕೃಷ್ಣ "
ಬೇಗ ಬಾ "ಕೃಷ್ಣ"

ನೀನು ಕನಸಲಿ "ಕೃಷ್ಣ "
ನೀನು ಮನಸಲಿ "ಕೃಷ್ಣ "
ನೀನು ತನು ಮನದಲಿ "ಕೃಷ್ಣ "
ಎಲ್ಲೆಡೆ ನೀನೇ ನೀನು "ಕೃಷ್ಣ "

ನಿನ್ನ ವಿನಃ ನಾ ಬದುಕಲಾರೆ  "ಕೃಷ್ಣ "
ನೀನಲ್ಲದೆ ನಾನು ಉಸಿರಾಡಲಾರೆ "ಕೃಷ್ಣ "
ಏಕಾಂತ ಜೀವನ ಕಳೆಯಲಾರೆ "ಕೃಷ್ಣ "
ವಿರಹದ ಕಷ್ಟ ಸಹಿಸಲಾರೆ "ಕೃಷ್ಣ "

ಹೃದಯ ನೋವಿನಿಂದ ಅಳುತ್ತಿದೆ "ಕೃಷ್ಣ "
ನೀನಿಲ್ಲದೆ ಎಲ್ಲ ಆಸೆ ಸೋತಿದೆ "ಕೃಷ್ಣ "
ನಿದ್ರೆ ನನ್ನನ್ನು ಮರೆತಿದೆ  "ಕೃಷ್ಣ "
ಏಕೆ ನಾ ಬದುಕುವೆ "ಕೃಷ್ಣ "

ಎಲ್ಲಿದ್ದಿ ನೀ "ಕೃಷ್ಣ "
ಕಾದು  ಕಾದು  ಸೋತು ಹೋದೆ "ಕೃಷ್ಣ "
ನಿನ್ನ ರಾಧೆ ಬದುಕಲಾರಳು "ಕೃಷ್ಣ "
ಬೇಗ ಬಾ "ಕೃಷ್ಣ"
by ಹರೀಶ್ ಶೆಟ್ಟಿ ,ಶಿರ್ವ

ಕೃಷ್ಣ ಬಂದ ಕೃಷ್ಣ ಬಂದ

ಕೃಷ್ಣ ಬಂದ  ಕೃಷ್ಣ ಬಂದ
ಆನಂದ, ಉಲ್ಲಾಸ ತಂದ

ಗೋಕುಲ ಕುಮಾರ ನಂದ
ಯಶೋದ ಕಂದ ಮುಕುಂದ
ಸುಂದರ  ಬಲು ಚೆಂದ

ಕೃಷ್ಣ ಬಂದ  ಕೃಷ್ಣ ಬಂದ
ಆನಂದ, ಉಲ್ಲಾಸ ತಂದ

ಹಾಲು, ಮೊಸರ ತಿಂದ
ಆಡಿ ಓಡಾಡಿ ಬಂದ
ಗೋಪಿಯರ ದೂರು ತಂದ

ಕೃಷ್ಣ ಬಂದ  ಕೃಷ್ಣ ಬಂದ
ಆನಂದ, ಉಲ್ಲಾಸ ತಂದ

ಪುತಾನ, ಅಘಾಸುರನನು  ಕೊಂದ
ಇಂದ್ರನ ಅಹಂಕಾರ ಅರಿವಿಗೆ ತಂದ
ಗೋವರ್ಧನ ಪರ್ವತ ಎತ್ತಿ ಕೊಂಡ

ಕೃಷ್ಣ ಬಂದ  ಕೃಷ್ಣ ಬಂದ
ಆನಂದ, ಉಲ್ಲಾಸ ತಂದ

by  ಹರೀಶ್ ಶೆಟ್ಟಿ, ಶಿರ್ವ

Saturday, August 20, 2011

ಕೃಷ್ಣ ನೀನು.....

ಕೃಷ್ಣ ನೀನು ನನ್ನ ಕಂದ
ಆದರೆ ನಾನು ಯಶೋದೆಯ
ಮುಗ್ದ ಮಮತೆ ಎಲ್ಲಿಂದ ತರಲಿ
ಕೃಷ್ಣ ನೀನು ನನ್ನ ಪ್ರೇಮ
ಆದರೆ ನಾನು ರಾಧಾಳ
ನಿರ್ಮಲ ಹೃದಯ ಎಲ್ಲಿಂದ ತರಲಿ
ಕೃಷ್ಣ ನೀನು ನನ್ನ ಗೆಳೆಯ
ಆದರೆ ನಾನು ಸುಧಾಮನ
ಅಮೋಘ ಮೈತ್ರಿ ಎಲ್ಲಿಂದ ತರಲಿ

ಕೃಷ್ಣ ನೀನು ನನ್ನ ಆರಾಧನೆ
ಆದರೆ ನಾನು ಮೀರಾಳ
ಪವಿತ್ರ ಭಕ್ತಿ ಎಲ್ಲಿಂದ ತರಲಿ

ಕೃಷ್ಣ ನೀನು ನನ್ನ ಸಾರಥಿ
ಆದರೆ ನಾನು ಅರ್ಜುನನ
ಶಕ್ತಿ, ಕೌಶಲ್ಯ ಎಲ್ಲಿಂದ ತರಲಿ

by ಹರೀಶ್ ಶೆಟ್ಟಿ, ಶಿರ್ವ

Friday, August 19, 2011

ಭ್ರಷ್ಟಾಚಾರದ ಸೂರ್ಯಾಸ್ತ

ಡೋಲು, ಮುದ್ದಳೆ ಬಾರಿಸಿ
ವಾದ್ಯ ನುಡಿಸಿ
ಪತಾಕೆ ಹಾರಿಸಿ
ಸತ್ಯದ ಧ್ವಜವ ಏರಿಸಿ
ಭ್ರಷ್ಟಾಚಾರದಿಂದ ದೇಶವ ಉಳಿಸಿ

ಶುರು ಆಗಲಿದೆ ಹೊಸ ಯುಗ
ದೇಶ ಬೆಳಗಲಿದೆ  ಜಗಮಗ

ಆಗಲಿದೆ ಭ್ರಷ್ಟಾಚಾರದ ಸೂರ್ಯಾಸ್ತ
ಮುಗಿಯಲಿದೆ ಜನರ ಕಷ್ಟ

ಜಯ ಜಯ ಜಯ ಅಣ್ಣ
ತೆರೆದಿರಿ ನೀವು ಜನರ ಕಣ್ಣ

ನಿದ್ರೆಯಲ್ಲಿತ್ತು ಜನರ  ದೇಶ ಭಕ್ತಿ
ನಿಮ್ಮ ಸತ್ಯದ ಹೋರಾಟದಿಂದ ಬಂತು ಶಕ್ತಿ

ಅಡಗಿತ್ತು ಜನರ ದೇಶ ಭಾವನೆಗಳ
ನಿಮ್ಮಿಂದ ಹೊರ ಚಿಮ್ಮಿತು ಅವರ ವಿಚಾರಗಳ

ಮರೆತ್ತಿದ್ದರು  ಜನರು ತನ್ನ ಕರ್ತವ್ಯಗಳ
ನೆನಪಿಸಿ ಮಾಡಿದಿರಿ ಉಪಕಾರಗಳ

ಪಂಜನ್ನು ಹಚ್ಚಿ
ಸತ್ಯವನ್ನು  ಮೆಚ್ಚಿ
ಸುಳ್ಳನ್ನು ಕೊಚ್ಚಿ
ಮನವನ್ನು ಬಿಚ್ಚಿ
ಬನ್ನಿ ಹೋರಾಡುವ
ದೇಶಕ್ಕಾಗಿ  ಸಮಯ ನೀಡುವ
ಭ್ರಷ್ಟಾಚಾರವನ್ನು ಆಚೆ ಅಟ್ಟುವ  
by ಹರೀಶ್ ಶೆಟ್ಟಿ, ಶಿರ್ವ

Thursday, August 18, 2011

ನಾನೂ ಅಣ್ಣ, ನೀನೂ ಅಣ್ಣ

ನಾನೂ ಅಣ್ಣ,  ನೀನೂ ಅಣ್ಣ
ಬನ್ನಿ ಬದಲಾಯಿಸುವ ದೇಶದ ಬಣ್ಣ

ನಮ್ಮ ಒಂದೇ ವಿಚಾರ
ಬೇಡ ಭ್ರಷ್ಟಾಚಾರ
ಬೇಕು ನ್ಯಾಯ
ನಡೆಯಲಾರದು ಅನ್ಯಾಯ

ಇದು ಜನ ಆಂದೋಲನ
ಕಿತ್ತು ಹಾಕುವ ಭ್ರಷ್ಟ ಸರಕಾರವನ್ನ
ಬೇಡ ಭ್ರಷ್ಟ ಆಡಳಿತದ ದುಷ್ಟ ಕರ್ತುತ್ವ
ಜನರ  ಮತದ ಇರಲಿ ಮಹತ್ವ

ಜನ ಜನರ ಹೋರಾಟ
ನಿಲ್ಲಲ್ಲಿ ಆಡಳಿತ ಪಕ್ಷದ ಆಟ
ನೋಡಲಿ ಜನ ಶಕ್ತಿಯ ಕೌಶಲ್ಯ
ತಿಳಿಯಲಿ ಜನರು ಕೊಟ್ಟ  ಮತದ  ಮೌಲ್ಯ

ತರುವ ಹೊಸ ಕ್ರಾಂತಿ
ನೆಲೆಸಲಿ ದೇಶದಲ್ಲಿ ಶಾಂತಿ
ಪಾಸಾಗಲಿ ಜನ ಲೋಕಪಾಲ
ಹೋಗಲಿ ಆ ಭ್ರಷ್ಟ ಕಾಲ

ನಾನೂ ಅಣ್ಣ ನೀನೂ ಅಣ್ಣ
ಬನ್ನಿ ಬದಲಾಯಿಸುವ ದೇಶದ ಬಣ್ಣ
by  ಹರೀಶ್ ಶೆಟ್ಟಿ, ಶಿರ್ವ

Wednesday, August 17, 2011

ಅಳು ಗೆಳತಿ

ಇದು ಕಟ್ಟು ಕಥೆಯಲ್ಲ
ಇದೇ ಸತ್ಯ ಗೆಳತಿ
ಅವನಿಲ್ಲ ಇನ್ನು
ತನ್ನನ್ನು ಸಾವರಿಸಿಕೋ ಗೆಳತಿ

ಕ್ರೂರ ಮೌನವ ಕೂಗುತ್ತಿದೆ
ನಿನ್ನ ಅಳುವಿಗಾಗಿ ಕಾಯುತ್ತಿದೆ
ಕಣ್ಣಿರ ಸುರಿಸು ಗೆಳತಿ
ನಿನಗೂ ಅಳ ಬೇಕಾಗುತ್ತದೆ ಗೆಳತಿ

ಈ ಎಲ್ಲ ಹೊಸ ಮುಖಗಳು
ಬರುವ ನವ ಜನಗಳು
ದುಃಖಿಸುವ ಅಪರಿಚಿತರು
ನೀನೂ ಸ್ವಲ್ಪ ವಿಲಪಿಸು ಗೆಳತಿ

ಮನೆ ಎಲ್ಲ ತುಂಬಿದೆ
ಶೋಕದಲ್ಲಿ ಬೆಂದಿದೆ
ಗಾಳಿ ಬರಲು ದಾರಿ ಇಲ್ಲದೆ ಮಲಗಿದೆ
ಸ್ವಲ್ಪ ನಮಗೆ ಉಸಿರಾಡಲು ಕೊಡು ಗೆಳತಿ

ರವಿಯು ಕಪ್ಪಾಗಿದೆ
ಚಂದ್ರನ ಪ್ರಯಾಣ ಸುರುವಾಗಿದೆ
ದಿನ ಉದಯಿಸಲು ಕಾಯುತ್ತಿದೆ
ಸ್ವಲ್ಪ ರೋದಿಸು ಗೆಳತಿ

ಹೋದ ಅವನು ಕೈಯ ಕೊಟ್ಟು
ಕನಸೆಲ್ಲ ಹೋಯಿತು ಸುಟ್ಟು
ಪಶ್ಚಾತ್ತಾಪ ಪಡಲು ಹೋದ ಬಿಟ್ಟು
ಅಳು ಗೆಳತಿ, ಅಳು ಗೆಳತಿ
by ಹರೀಶ್ ಶೆಟ್ಟಿ ,ಶಿರ್ವ
 

Tuesday, August 16, 2011

ಇನ್ನೊಂದು ಸೆರೆ

ಇನ್ನೊಂದು ಸೆರೆ
ಸತ್ಯದ ಬಂಧನ
ಇನ್ನೊಂದು ಮುರಿಯುತು ಆಂಧೋಲನ

ಸುಳ್ಳಿನ ಬಾಜಾರ
ರಾಜಕೀಯ ವ್ಯಭಿಚಾರ
ಏರಿದೆ ಅತ್ಯಾಚಾರ
ಮುಕುಟ ಧರಿಸಿ
ರಾಜಿಸುತ್ತಿದ್ದಾನೆ  ಭ್ರಷ್ಟಾಚಾರ

ಕಂಡ ಕಂಡಲ್ಲಿ ಮೋಸಗಾರರು
ಹಣದ  ದಾಸರು
ಲಂಚಾವತಾರದ ಶೂರರು
ಸಭ್ಯ ದರೋಡೆಕೋರರು

ಮದ್ಯಪಾನ ವ್ಯಾಪಾರ
ಕಳ್ಳತನ ವ್ಯವಾಹಾರ
ಅಹಿಂಸಾವಾದಿ ನೀತಿಗೆ ಪ್ರಹಾರ
ಬಡತನ ಶಾಪದ ಭಾರ

ಸತ್ಯಕ್ಕೆ ಉಪವಾಸದ ಸಜಾ
ಸುಳ್ಳಿಗೆ  ಗೌರವದ ಮಜಾ
ಬೆತ್ತಲೆ ಸಮಾಜ
ಎಲ್ಲಾ  ಬಿಟ್ಟವನೇ ರಾಜ
by  ಹರೀಶ್ ಶೆಟ್ಟಿ, ಶಿರ್ವ 

Kabir Doha (ಕಬೀರ ದೋಹ )

Kabir Doha  (ಕಬೀರ ದೋಹ )

Kabir Maala Kaath Kee, Kahi Samjhave Tohi
Man Na Firave Aapna, Kaha Firave Mohi

ಅನುವಾದ :ಹರೀಶ್ ಶೆಟ್ಟಿ, ಶಿರ್ವ

ಕಬೀರ ಮಣಿಮಾಲೆಯು ಮರದ, ಏನು ಶಿಕ್ಷಣ ನೀಡುವುದು ನಿನಗೆ
ಮನಸ್ಸು ನಿಯಂತ್ರಿಸಲಾರೆ ನೀ, ಎಲ್ಲಿ  ತಿರುಗಿಸುವೆ ನನಗೆ

Monday, August 15, 2011

ಧ್ವಜದ ದುರ್ದೆಸೆ

ಕೇಳಿದೆ ನಾ ತ್ರಿವರ್ಣ ಧ್ವಜವನ್ನು
"ನಿನ್ನನ್ನು ಏರಿಸುತ್ತಾರೆ ಎತ್ತರ
೨೬ ಜನವರಿ ಹಾಗು ೧೫ ಆಗಸ್ಟ್ ರಂದು
ಗೌರವಿಸುತ್ತಾರೆ  ಅಭಿಮಾನದಿಂದ
ಬೇರೆ ಸಮಯ ಅವರಿಗೆ ನೀನೊಂದು ಪ್ರದರ್ಶನದ ವಸ್ತು
ಅಲ್ಲದೆ ರಸ್ತೆಯಲ್ಲಿ ಬಿದ್ದು ಹಾರಾಡುವ ತುಣುಕು"
ಬೇಸರವಿಲ್ಲವೇ  ನಿನಗೆ ?
ಭಾರತ ದೇಶದ ಧ್ವಜ ವಾಗಿ
ಭಾರತದಲ್ಲೇ ನಿನ್ನ ಗತಿ ಈಗೆ ಯಾಕೆ?
ವರ್ಷದ ಈ ಎರಡು ದಿವಸದ ಗೌರವ ನಿನಗೆ ಬೇಕೇ?

ತ್ರಿವರ್ಣ ಧ್ವಜ ಹೇಳಿತು ದುಃಖದಿಂದ
"ನಿಮ್ಮ ಮನದಲ್ಲಿ ನನಗೆ ಸದಾ ಗೌರವ ಇದೆ
ಆದರೆ ಬಡತನ, ಭ್ರಷ್ಟಾಚಾರದಿಂದ
ನಿಮಗೆ  ಮನಶಾಂತಿ ಇಲ್ಲದಾಗಿದೆ
ನನಗೆ ಈ ಗೌರವ ೩೬೫ ದಿವಸ ಬೇಕಾಗಿದೆ
ಆದರೆ ಈಗ ದೇಶದ ಸ್ಥಿತಿ ಗಂಭೀರವಾಗಿದೆ
ನನ್ನ ಮರ್ಯಾದೆ ಬೀದಿ ಪಾಲಾಗಿದೆ,
ದೇಶದ ಅಭಿಮಾನವಾದ ನನಗೆ
ನನ್ನದೇ ಅವಸ್ಥೆ  ದಯನೀಯವಾಗಿದೆ
ರಾಜಕಾರಣಿಗಳ ದುರಾಶೆಯಿಂದ
ನನ್ನ ಬಾಳೆ ಅಪಾಯಕಾರಿಯಾಗಿದೆ "
ನನ್ನ ತಲೆ ತಗ್ಗಿಸ ಬೇಡ ಮಾನವ
ದೇಶ ಪ್ರೇಮದ ಚಿಹ್ನೆಯಾದ ನನಗೆ
ಒಂದು ಪ್ರದರ್ಶನದ ವಸ್ತು ಹಾಗು
ರಸ್ತೆಯಲ್ಲಿ ಬಿದ್ದು ಹಾರಾಡುವ ತುಣುಕಾಗಿ
ಅಗೌರವ ತೋರಿಸ ಬೇಡ ಮಾನವ"
by ಹರೀಶ್ ಶೆಟ್ಟಿ, ಶಿರ್ವ

Sunday, August 14, 2011

ಸ್ವಾತಂತ್ರ್ಯ ಎಲ್ಲಿದೆ ?

ಸ್ವಾತಂತ್ರ್ಯ ಎಲ್ಲಿದೆ ?

ಮಕ್ಕಳನ್ನು ಹೆತ್ತು
ಮುದ್ದಾಗಿ ಸಾಕಿ ಬೆಳೆಸಿ
ಜೀವನ ಅವರ
ಬಾಳಿಗಾಗಿ  ಕಳೆಯುವ
ತ್ಯಾಗದ ಮೂರ್ತಿ ತಾಯಿಗೆ
ಸ್ವಾತಂತ್ರ್ಯ ಎಲ್ಲಿದೆ ?

ಮನುಜ ಕುಲದಲ್ಲಿ ಹುಟ್ಟಿ
ಮನುಜನಾಗಿ ಬಾಳದೆ
ತನ್ನಲ್ಲಿದ್ದ ಮನುಜನನ್ನು
ಕೊಂದು ದುರ್ಜನನಾಗಿ
ಬದುಕುವ ದುಷ್ಟ ಮನುಜನಿಗೆ
ಸ್ವಾತಂತ್ರ್ಯ ಎಲ್ಲಿದೆ ?

ತನ್ನ ಇಚ್ಛೆ ಆಕಾಂಕ್ಷೆಗಳನ್ನು
ಮರೆತು ಪೋಷಕರ
ಇಚ್ಚೆಯಂತೆ ನಡೆದು
ತನ್ನ ಜೀವನವನ್ನು
ನಿರಾಸೆಯಿಂದ ಜೀವಿಸುವ
ಅಸಹಾಯಕ ಮಕ್ಕಳಿಗೆ 
ಸ್ವಾತಂತ್ರ್ಯ ಎಲ್ಲಿದೆ ?

ಭ್ರಷ್ಟಾಚಾರದಲ್ಲಿ ಲಿಪ್ತನಾದ
ಹಾಳು ಪಿಸಾಚಿ
ರಾಜಕಾರಣಿಯ ದುಷ್ಟ
ಕೃತ್ಯವನ್ನು ಸಹಿಸಿ
ಅವನನ್ನೇ ಧ್ವಜ ವಂದನೆ
ಮಾಡುವುದನ್ನು ನೋಡಿ 
ಬಾಯಿ ಮುಚ್ಚಿ ಕೊಂಡು
ತಮಾಷೆ ನೋಡುವ ಜನರಿಗೆ
ಸ್ವಾತಂತ್ರ್ಯ ಎಲ್ಲಿದೆ ?
by  ಹರೀಶ್ ಶೆಟ್ಟಿ,ಶಿರ್ವ

ಬಾತುಕೋಳಿಯ ಕತೆ

ಸರೋವರದಲ್ಲಿ ಕುಳಿತ
ಬಾತುಕೋಳಿಯನ್ನು  ಕೇಳಿದೆ  ನಾ
"ನಿನ್ನ ಮುಖ ಎಷ್ಟು ಸುಂದರ ಶಾಂತ
ಕಾಣುವಿ ನೀ ತುಂಬಾ ಪ್ರಶಾಂತ
ನಯವಾದ  ಕೋಮಲ ನಿನ್ನ ರೂಪ
ನನಗೂ ಬೇಕು ನಿನ್ನ ಜೀವನದ ಸ್ವರೂಪ "
ಬಾತುಕೋಳಿ ಹೇಳಿತು ನಕ್ಕು
"ಕೇಳು ನೀನು ನನ್ನ ಕತೆ 
ನಾನೂ ಪಡುತ್ತೇನೆ ವ್ಯತೆ
ಕಳೆಯುತ್ತೇನೆ ಜೀವನವನ್ನು ಶಾಂತಿಯಿಂದ
ಇದರ ಕಾರಣ ನೀರಿನ ಅಡಿಯಲ್ಲಿ ನನ್ನ ಕಾಲುಗಳು
ಸತತ ನಡೆಸುತ್ತಿರುವ ಜೀವನದ ಹೋರಾಟದಿಂದ "
"ನೀನೂ ನಡೆ ನನ್ನ ಮಾರ್ಗ 
ಜೀವನದಲ್ಲಿ ಸತತ ಶ್ರಮಿಸಿ ದುಡಿದು
ನೀ ಜೀವನವನ್ನು ಮಾಡಿಕೋ ಸ್ವರ್ಗ"
by ಹರೀಶ್ ಶೆಟ್ಟಿ, ಶಿರ್ವ

Kabir Doha ( ಕಬೀರ ದೋಹ )

Kabir Doha ( ಕಬೀರ ದೋಹ )

Kabira Teri Jhompri Gal Katiyan Ke Paas
Jo Karenge So Bharenge Tu Kyon Bhayo Udaas

ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಕಬೀರ ನಿನ್ನ ಗುಡಿಸಲು,   ಕಸಾಯಿಖಾನೆಯ ಹತ್ತಿರಕ್ಕೆ
ಅವನು ಮಾಡಿದ ಕರ್ಮದ ಹೊಣೆಯು ಅವನೇ, ನೀನು ಕೊರಗುವುದು ಏಕೆ ?

Saturday, August 13, 2011

ಸಮುದ್ರದ ವಿಚಾರ

ಕೇಳಿದೆ ನಾ ಸಮುದ್ರಕ್ಕೆ
"ನೀನು ಇಷ್ಟು ವಿಶಾಲ 
ನಿನ್ನಲ್ಲಿ ತುಂಬಿದೆ
ಧನ ಸಂಪತ್ತು ಅಪಾರ,
ಆದರೂ ಕೆಲವು ಜನರು 
ನಿನ್ನಿಂದ ಪಡೆಯುತ್ತಾರೆ ಮುತ್ತುಗಳನ್ನು  ,
ಕೆಲವರು ಪಡೆಯುತ್ತಾರೆ ಮೀನುಗಳನ್ನು  
ಹಾಗು ಕೆಲವರು ಖಾಲಿ ಕೈ
ಒದ್ದೆ ಮಾಡಿ ಬರುತ್ತಾರೆ ಕಾಲನ್ನು,
ಏನು ನಿನ್ನ ವಿಚಾರ"
ಸಮುದ್ರ ಹೇಳಿತು ನಕ್ಕು
"ಹೌದು ನಾನು ಮಹಾ ಸಾಗರ
ಕೇಳು ನನ್ನ ವಿಚಾರ
"ನನ್ನಲ್ಲಿ ಹುಡುಕುತ್ತಾರೋ
ಯಾರು ಯಾವ ವಸ್ತು
ಕಷ್ಟಪಟ್ಟು ಪ್ರಯತ್ನಿಸುತ್ತಾರೋ
ಪಡೆಯುತ್ತಾರೆ ಅವರು ಅದೇ ವಸ್ತು"
ಜೀವನದಲ್ಲಿ ನೀ ಮಾಡು ನಿರ್ಧಾರ
ಹೋಗು ಮನಸ್ಸಿನ ದ್ವಾರ 
ಕಷ್ಟಪಟ್ಟು  ಪ್ರಯತ್ನಿಸಿ ಗಳಿಸು 
ವಸ್ತು ಮನ ಪ್ರಕಾರ"
by ಹರೀಶ್ ಶೆಟ್ಟಿ ,ಶಿರ್ವ 

ರಕ್ಷಾ ಬಂಧನ

ನಿನ್ನ ನೆನಪು ಕಾಡುತ್ತಿದೆ 
ಈ ದಿನ ರಕ್ಷಾ ಬಂಧನ

ನಿನ್ನ ಸಿಹಿ ನಗೆ
ನಿನ್ನ ಮುಗ್ದವಾದ ಕೋಪ
ನನ್ನ ಮಾತನ್ನು ತಾಳ್ಮೆಯಿಂದ ಕೇಳುವುದು
ನಿನ್ನ ಜಗಳವಾಡುವುದು
ನಂತರ ಪ್ರೀತಿಯಿಂದ ಕೊಂಡಾಡುವುದು
ದುಃಖದಲ್ಲಿದ್ದಾಗ
ನನ್ನನ್ನು ನಗಿಸುವುದು

ಸಂಜೆಯ ಸಮಯ ನನ್ನ ನಿನ್ನ
ವಿಷಯ ಮಾತನಾಡುವುದು
ನನ್ನ ಮೂರ್ಖತನಕ್ಕೆ ನಗುವುದು
ನನ್ನ ತಪ್ಪಿಗೆ ಬೈಯುವುದು
ನಂತರ ನನಗೆ ಬುದ್ದಿವಾದ ಹೇಳುವುದು
ತಾಯಿಯಾಗಿ , ಮಿತ್ರನಾಗಿ
ನನ್ನನ್ನು ಕಾಪಾಡುವುದು

ರಕ್ಷಾ ಬಂಧನದ ದಿವಸ
ನನಗೆ ತಿಲಕ ಮಾಡಿ
ಗಂದದ ಕೈಯನ್ನು 
ನನ್ನ ಮುಖಕ್ಕೆ ಹಚ್ಚಿ ನಗುವುದು
ನನಗೆ ರಾಖಿ ಕಟ್ಟಿ
ಮಿಟಾಯಿ ತಿನ್ನಿಸಿ
ಹೃದಯದಿಂದ  ಆಶಿರ್ವಾದಿಸುವುದು

ನಿನ್ನ ನೆನಪು ಕಾಡುತ್ತಿದೆ 
ಈ ದಿನ ರಕ್ಷಾ ಬಂಧನ
by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ)

Kabir Doha  (ಕಬೀರ ದೋಹ)

Guru Kumhar Sikh Kumbh Hai, Gadh Gadh Kadhe Khot
Antar Hath Sahar De, Bahar Bahe Chot

ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಗುರು ಕುಂಬಾರ,  ಶಿಷ್ಯ ಕಚ್ಚಾ ಮಡಕೆ , ನ್ಯೂನತೆಯ ಪರಿಹರಿಸಿ ಆಕಾರ ಕೊಡುವನು
ಒಳ ಕೈಯಿಂದ ರಕ್ಷಣೆ ನೀಡುವನು , ಹೊರಗಿನಿಂದ ಬಡಿತ ಇರುವನು

Friday, August 12, 2011

ಭಾವನೆಗಳ ಕೊಲೆ


ಮನಸ್ಸಿನಲ್ಲಿಲ್ಲ ಈಗ ಆ ಅಲೆ
ಆಯಿತು ಭಾವನೆಗಳ ಕೊಲೆ

ಮನದಲ್ಲಿ ಮೂಡುತ್ತಿದ್ದ ಅನೇಕ 
ಪ್ರಕಾರದ ವಿಚಾರಗಳ
ಹೃದಯದ ಕೋಣೆಗಳಲ್ಲಿ
ಅಡಗಿಟ್ಟ ಹಲವು ಕನಸುಗಳ

ಮನ ಮೋಹಿಸಿದ
ಆ ಅದ್ಭುತ ದೃಶ್ಯಗಳ 
ಕಣ್ಣಿರು ಸುರಿಸಿದ
ಆ ಹೃದಯ ನಡುಗಿಸಿದ  ಘಟನೆಗಳ 

ಪ್ರೇರಿಸಿದ ಆ
ಸುಂದರ ಕಲ್ಪನೆಗಳ
ಜ್ಞಾನದ
ಆ ಸುಂದರ ಮಾತುಗಳ

ಆನಂದದಿಂದ ಜೀವಿಸಿದ
ಜೀವನದ ಆ ಮಧುರ ಕ್ಷಣಗಳ
ದುಃಖದಲ್ಲಿ ಕಳೆದ
ಆ ಕಷ್ಟದ ದಿನಗಳ

ಸಾಹಿತ್ಯದ ಲೋಕವ ಬಂದು
ಸಾಹಿತ್ಯದಲ್ಲಿ  ಸ್ಥಾನ
ಪಡೆಯಲು  ಅಸಮರ್ಥನಾದೆ
ಹೇಗೆ ಬರೆಯುವುದು ಕವಿತೆಗಳ?
ಹೇಗೆ ಉಪೋಯೋಗಿಸುವುದು ಪದಗಳ?
ಎಲ್ಲಿಂದ ತರಲಿ ಶಬ್ದಗಳ?

ಕಾಯುತಿದ್ದ
ಪುಸ್ತಕದ ಖಾಲಿ ಹಾಳೆಗಳ
ಪೆನ್ನಿನ
ಒಣಗಿದ ಶಾಯಿಗಳ 
ವ್ಯಕ್ತಪಡಿಸುವುದು ಹೇಗೆ
ಭಾವನೆಗಳ 

ಮನಸ್ಸಿನಲ್ಲಿಲ್ಲ ಈಗ ಆ ಅಲೆ
ಆಯಿತು ಭಾವನೆಗಳ ಕೊಲೆ
by ಹರೀಶ್ ಶೆಟ್ಟಿ , ಶಿರ್ವ 

Kabir Doha (ಕಬೀರ ದೋಹ )

Kabir Doha (ಕಬೀರ ದೋಹ )

Kabir Soyee Soorma, Man Soon Maande Jhoojh
Panch Pyada Paari Le, Door Kare Sab Dooj

ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಕಬೀರ ಅವನೇ ಯೋಧ , ಮನಸ್ಸನ್ನು ಹತೋಟಿಯಲ್ಲಿ ಇಡುವವ
ಐದು ಇಂದ್ರಿಯವ ವಶದಲ್ಲಿದ್ದರೆ, ದೂರ ಆಗುವುದು ಸಂಕಟ ಎಲ್ಲವ 
*ಐದು ಇಂದ್ರಿಯ  ಕಾಮ , ಸಿಟ್ಟು, ಅಹಂಕಾರ,ಭಾಂದವ್ಯ ,ದುರಾಸೆ
(ಕಾಮ, ಕ್ರೋಧ, ಮದ, ಮತ್ಸರ, ಲೋಭ ಮೋಹ)

Thursday, August 11, 2011

ಜಲಪಾತಗಳ ತಾಳ್ಮೆ

ಜಲಪಾತಗಳ ನೋಡಿ ಕೇಳಿದೆ ನಾ
"ಎಷ್ಟು ಸುಂದರ ಹಾಗೂ
ಆಕರ್ಷಕವಾದ  ರೀತಿಯಲ್ಲಿ
ನೀ ಜರಿಯುವಿ,
ಎಷ್ಟು ಸುಲಭವಾಗಿ, ಎಷ್ಟು ತಾಳ್ಮೆಯಿಂದ
ನೀ ಸತತವಾಗಿ ಜರಿಯುವಿ
ಏನು ಇದರ ರಹಸ್ಯ
ಜಲಪಾತ ಹೇಳಿತು ನಕ್ಕು
ಜರಿಯುತ್ತಿದ್ದೇನೆ ನಾ ರಾತ್ರಿ ಹಗಲು
ನಾನು ಹುಟ್ಟಿದ್ದು ಹೀಗೆಯೇ ಪತನವಾಗಲು
"ನನ್ನಿಂದ ನೀವು ಪಾಠ ಒಂದು ಕಲಿಯಬೇಕು
 ನಾನು ಜರಿಯುವ ಹಾಗೆ
ನೀವು ಸಹ ಸೋಲು,
ನಷ್ಟ, ಅವಮಾನ,ಪ್ರತಿಕೂಲ
ಸುಲಲಿತವಾಗಿ ಸ್ವೀಕರಿಸಬೇಕು,
ಮನುಷ್ಯನಲ್ಲಿ ಎಲ್ಲವನ್ನು ಸಹಿಸುವಷ್ಟು
ತಾಳ್ಮೆ ಇರಬೇಕು"
by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

Kabir Doha  (ಕಬೀರ ದೋಹ )

Kabir Soota Kya Kare, Koore Kaaj Niwaar
Jis Panthu Tu Chaalna, Soyee Panth Samwaar

ಅನುವಾದ :  ಹರೀಶ್ ಶೆಟ್ಟಿ, ಶಿರ್ವ

ಕಬೀರ ನಿದ್ರೆಯಿಂದ ಎದ್ದೇಳು,  ಕೊಳಕು ಕರ್ಮಗಳ ದೂರ ಸರಿಸು   
ಯಾವ ದಾರಿ ನಿನಗೆ ಹೋಗಲಿದೆಯೋ , ಅಲ್ಲಿಯೇ ಗಮನ ಹರಿಸು

Wednesday, August 10, 2011

ಕರುಣಮಾಯಿ

ಕರುಣಮಾಯಿ
ಅವನು ಅವಳನ್ನು ಕರೆದದ್ದು ಇದೇ ಹೆಸರಿನಲ್ಲಿ
ಅವಳ ನಿಜ ಹೆಸರು ಮುಚ್ಚಮ್ಮ
ಎಲ್ಲರೂ ಅವಳನ್ನು ಇದೇ ಹೆಸರಲ್ಲಿ ಕರೆಯುತ್ತಿದ್ದರು

ಅವಳು ವಿಧವೆ
ಅವಳಿಗೆ ಮಕ್ಕಳಿಲ್ಲ
ಸಂಬಂಧಿಕರು ಇದ್ದು ಇಲ್ಲ
ಹೀಗೆಯೇ ಒಂಟಿ ಜೀವನ ಕಳೆದು ಕಳೆದು
ಕಂಡಳು ಒಂದು ಅನಾಥನನ್ನು
ಅವನನ್ನು ನೋಡಿ ಮನ ತುಂಬಿ ಬಂದು
ಅವನನ್ನು  ಕರೆದು ಕೊಂಡು ಬಂದಳು ಮನೆಗೆ

ಅವಳ ಜೀವನಕ್ಕೆ ಸಿಕ್ಕಿತು ಒಂದು ಗುರಿ
ಹಿಗಿಯೇ ಹಲವು ಅನಾಥರನ್ನು ಮನೆಗೆ
ಕರೆದು ಕೊಂಡು ಬಂದಳು ಬಾರಿ ಬಾರಿ
ಈಗ ಅವರೇ ಅವಳ ಜೀವನ

ಸಂಜು,ಹರಿ,ಮೀನಾ,ಮಂಜು,ನಿಹಾರಿಕ
ಮುದ್ದಾದ ಮಕ್ಕಳು
ಇವರೆಲ್ಲರೂ ಅವಳ ಸಂಸಾರ
ತನ್ನ ಎಲ್ಲ ಪ್ರೀತಿಯನ್ನು ಕೊಟ್ಟಳು ಅವರಿಗೆ
ಜೀವನ ಬಂತು ಒಂದು ದಾರಿಗೆ

ಮುಚ್ಚಮ್ಮ ಆಸ್ತಿವಂತಳಲ್ಲ
ಅವಳು ಬಡವಿ
ದುಡಿಯುತ್ತಿದ್ದಳು ಅಲ್ಲಿ ಇಲ್ಲಿ
ಅಷ್ಟರಲ್ಲೇ  ತೃಪ್ತಿ, ಸಂತೋಷ
ಮಕ್ಕಳ ಒಟ್ಟಿಗೆ ಸುಖ ದುಃಖ ಹಂಚುತ
ಅದರಲ್ಲೇ ಅವಳಿಗೆ ಹರ್ಷ

ಮಕ್ಕಳಿಗೆ ಅವಳೆಂದರೆ ಜೀವ
ಅವಳೇ ಅವರ ಬಾಳಿಗೆ ದೇವ
ಮುಚ್ಚಮ್ಮ ಮುಚ್ಚಮ್ಮ ಎಂದು ಕರೆದು
ಅವಳ ಹಿಂದೆಯೇ ಇಡಿ  ದಿನ

ದಿನ ಹಕ್ಕಿಯಂತೆ ಹಾರುತ್ತಿತ್ತು
ಮಕ್ಕಳು ಹೆಚ್ಚು ಆದಂತೆ
ಕಷ್ಟಗಳು ಏರಿತು
ನನ್ನಿಂದ ಏಕೆ ಮಕ್ಕಳಿಗೆ ಕಷ್ಟ
ಬಂದಳು ಒಂದು ನಿರ್ಧಾರಕ್ಕೆ
ಕೊಡುವೇನು ಯಾರಿಗಾದರೂ ದತ್ತಕ
ಅವರು ಒಳ್ಳೆಯಿಂದ ಸಾಕುವರು ಇವರನ್ನ

ಅವನಿಗೆ ಮಕ್ಕಳಿಲ್ಲ
ಮಕ್ಕಳು ಬೇಕೆಂದು ಆಸೆ
ಕೇಳಿದ ಮುಚ್ಚಮ್ಮಳ ಬಗ್ಗೆ
ಬಂದ ಅವಳ ಹತ್ತಿರ ಹೆಂಡತಿಯ ಒಟ್ಟಿಗೆ
ಚಿಕ್ಕ ಮುದ್ದು ಹುಡುಗಿ ನಿಹರಿಕಾಳನ್ನು  ನೋಡಿ
ಮಮತೆ ಮೂಡಿತು ಅವರಿಗೆ
ಈ ಪುಟ್ಟ ಹುಡುಗಿ ಆಗುವಳು ನಮ್ಮ ಮಗಳು
ಇದರಿಂದಲೇ ಸೋಗಸಾಗುವುದು ನಮ್ಮ ಬಾಳು

ಮುಚ್ಚಮ್ಮಳ ಕಣ್ಣೀರು ಸುರಿಯಿತು,
ನಿಹಾರಿಕಾಳಿಗೆ ಎಲ್ಲ ಅರಿಯಿತು,
ನಾನು ಹೋಗುವುದಿಲ್ಲ ಎಂಬ ಒಂದೇ  ಹಠ,
ಹೊಡೆದಳು,ಬಡಿದಳು,
ಬೇಡಿದಳು ನಿಹರಿಕಾಳಿಂದ
ನಿಹಾರಿಕಾ ದುಃಖಿಸಿ ನುಡಿದಳು
ನಾನು ಕೇಳುವುದಿಲ್ಲ ಹೊಸ ಬಟ್ಟೆ
ನನಗೆ ಕೇಳುವುದಿಲ್ಲ ಊಟ ಅನ್ನ
ನನಗೆ  ಕಳಿಸ ಬೇಡಿ ಮುಚ್ಚಮ್ಮ

ಹೇಗೋ ಕಳಿಸಿದಳು ಅವಳನ್ನ,
ಕೂಗಿತು ಅವಳ ಮನ
ಮಕ್ಕಳೆಲ್ಲ ಶಾಂತ
ಅವರನ್ನು ನೋಡಿ
ಅತ್ತು ಅತ್ತು ತಡೆಯಲಾರದೆ ಓಡಿದಳು
ಅವನ ಮನೆಯ ದ್ವಾರ
ಜ್ಞಾನ ತಪ್ಪಿ ಬಿದ್ದಳು ಅಲ್ಲೇ
ಕತ್ತಲು ಕಳೆದು  ಬೆಳಕಾಯಿತು

ದ್ವಾರ ತೆಗೆಯುತ್ತಲೇ
ಅವನು ಕಂಡ ಮುಚ್ಚಮ್ಮಳನ್ನು
"ನನಗೆ ನಿಹಾರಿಕಾ ಕೊಡಿ ಸ್ವಾಮಿ"
ಬೇಡಿದಳು ಅವಳು
ಅವಳನ್ನು ಸಾವರಿಸಿ 
ಅವಳನ್ನೇ ನೋಡುತಾ ಹೇಳಿದ ಅವನು
"ಮುಚ್ಚಮ್ಮ ನೀ ದಯಾ ಸಾಗರ
ನೀನು ಒಂದು ದೇವಿಯ ಅವತಾರ
ಈ ಮಕ್ಕಳ ಬಾಳಿನ ನೀನೇ ಹೆತ್ತಾಯಿ
ಈ ಮಕ್ಕಳಿಗೆ ನೀನೇ ತಾಯಿ
ನೀನು ...ಕರುಣಾಮಯಿ ಎಲ್ಲರ ತಾಯಿ
ನಿನಗೆ ನೀಡುವೆ ಒಂದು ಬಿರುದು ನಾನು ...ನೀನು "ಕರುಣಮಾಯಿ "
.by ಹರೀಶ್ ಶೆಟ್ಟಿ,ಶಿರ್ವ





Kabir Doha (ಕಬೀರ ದೋಹ)

Kabir Doha (ಕಬೀರ ದೋಹ)

Jab Mein Tha Tab Hari Nahin, Jab Hari Hai Mein Nahin
Sab Andhiyara Mit Gaya, Jab Deepak Dekhya Mahin

ಅನುವಾದ: ಹರೀಶ್ ಶೆಟ್ಟಿ, ಶಿರ್ವ

ನಾನಿದ್ದಾಗ ಹರಿ ಇಲ್ಲ,  ನಾನಿಲ್ಲ ಹರಿ ಇದ್ದಾಗ
ಎಲ್ಲ ಕತ್ತಲೆ (ತಪ್ಪುಗ್ರಹಿಕೆ) ಕರಗಿ ಹೋಯಿತು, ದೀಪವ ನನ್ನಲ್ಲಿ ಕಂಡಾಗ

Tuesday, August 9, 2011

ಪಾತರಗಿತ್ತಿಯ ಜೀವನ

ಕೇಳಿದೆ ನಾ ಪಾತರಗಿತ್ತಿಯ
"ನೀ ಕೇವಲ ಹದಿನಾಲ್ಕು ದಿವಸ
ಬದುಕುವಿ ಆದರು ಸಂತೋಷದಿಂದ,
ಉಲ್ಲಾಸದಿಂದ ಜೀವನ ಕಳೆದು
ಅನೇಕ ಹೃದಯ ಗೆಲ್ಲುವಿ,
ನಿನ್ನ ಜೀವನ ಸಣ್ಣ
ಆದರೆ ನಿನ್ನ ಜೀವನದಲ್ಲಿ ಅನೇಕ ಬಣ್ಣ"

ಪಾತರಗಿತ್ತಿ ಹೇಳಿತು ನಕ್ಕು
"ಹೌದು ನನ್ನ ಜೀವನ ಚಿಕ್ಕದು
ಆದರೆ ನನ್ನ ಮನಸ್ಸು ದೊಡ್ಡದು
ಸುಂದರ ಜೀವನ ನನಗೆ ಮೆಚ್ಚಿದ್ದು".
"ಮಾತು ಒಂದು ಕೇಳಿ ನನ್ನ
ಜೀವನದ ಪ್ರತಿ ಕ್ಷಣವು ಚೆನ್ನ
ಉತ್ಸಾಹ, ಉಲ್ಲಾಸ, ಚೈತನ್ಯ
ಆನಂದದಿಂದ ಜೀವನ ಕಳೆದರೆ
ಸುಖ ಇರುವುದು ನಿಮ್ಮ ಬೆನ್ನ
ನಿಮ್ಮ ಜೀವನ ಆಗುವುದು ಚಿನ್ನ"
by ಹರೀಶ್ ಶೆಟ್ಟಿ, ಶಿರ್ವ

ಚಿತ್ರದ ಎರಡು ಬದಿ

ಒಂದು ಚಿತ್ರವ ಬಿಡಿಸಿದ ಅವನು
ಚಿತ್ರ ವಿಚಿತ್ರವಾಗಿತ್ತು

ಅದರಲ್ಲೊಂದು ಹುಡುಗಿ
ಅವಳ ಕೈಯ ಹಿಡಿದು
ಅಳುತ್ತಿದ್ದ ಒಂದು ಚಿಕ್ಕ ಹುಡುಗ
ದೂರದಲ್ಲಿ ಹೋಗುವ ಒಂದು ಕಾರು
ಮಿಂಚುವ ಕಾರಿನ ಬೆಳಕು
ಆದರೆ ಬೇರೆ ಎಲ್ಲೆಡೆ
ಬಣ್ಣ ಕಪ್ಪೆ ಕಪ್ಪು

ನೋಡುವವರಿಗೆ  ಬಲು ಸರಳವಾಗಿತ್ತು
ಆ  ಚಿತ್ರ
ನಡೆಯಿತು ವಿಮರ್ಶಕರ ಚರ್ಚೆ
ಇಟ್ಟರು ಅವರ ಅವರ  ತರ್ಕ
ಅವರವರಿಗೆ  ಅವರ ಮಾತೆ ಸತ್ಯ
ಅವನು ನಗುತ್ತಿದ್ದ
ಅವನ ನಗುವಿನಲ್ಲಿ ದುಃಖ ಅಡಗಿತ್ತು

ನೆನಪಾಯಿತು ಆ ಸಮಯ
ಮರೆಯಲಾರದ ಆ ದಿನ
ಅಮ್ಮ ಅಪ್ಪನ ಅಕಾಲ
ಮೃತ್ಯು ನಂತರ
ತಬ್ಬಲಿಯಾಗಿ ಅವರನ್ನು ಬಿಟ್ಟು
ಹೋದ ಸಂಭದಿಕರು
ಅಕ್ಕನ ಕೈ ಹಿಡಿದು ಅವನು
ಅಲ್ಲಿ ಇಲ್ಲಿ ಅಲೆಯುದನ್ನು
ಕಷ್ಟದ ದಿನಗಳನ್ನು

ನೋಡುವವರ ಕಣ್ಣಿಗೆ ಅವರದ್ದೇ  ವಶ
ಅವರು ಕಾಣುವುದು ಒಂದೇ ಅಂಶ
ಕಾಣಲಾರರು ಅವರು ಚಿತ್ರದ ಇನ್ನೊಂದು  ಅಂಶ
ಪ್ರತಿಯೊಂದು ಚಿತ್ರವೂ ಎರಡು ಬದಿ ಹೊಂದಿದೆ
ಪ್ರತಿಯೊಂದು ಮನುಷ್ಯನ ಜೀವನ
ದುಃಖವೆಂಬ ಬೆಂಕಿಯಲ್ಲಿ ನೊಂದಿದೆ
by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ)

Kabir Doha   (ಕಬೀರ ದೋಹ)

Moond Munddavat Din Gaye, Ajhun Na Miliya Raam
Raam Naam Kahu Kya Karey, Je Man Ke Aurey Kaam

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಯುಗ ಕಳೆಯಿತು ಕೇಶ ಮುಂಡನೆ ಮಾಡುತ, ರಾಮ ಸಿಗಲಿಲ್ಲ ಇನ್ನೂ
ಕೇವಲ ರಾಮ ನಾಮ ಏನು ಮಾಡಲು ಸಾಧ್ಯ , ಮನಸ್ಸು ಬೇರೆಡೆ ನಿನ್ನ

Monday, August 8, 2011

ಕೊಳಲಿನ ಮಧುರ ಸ್ವರ

ಕೇಳಿದೆ  ನಾ ಕೊಳಲಿಗೆ
"ನಿನ್ನ ಮೈಯಲ್ಲಿ  ಎಷ್ಟು ತೂತುಗಳು ,
ಒಳಗಿನಿಂದ  ನೀ  ಖಾಲಿ
ಆದರೆ ನಿನ್ನನ್ನು ಊದಿದರೆ
ನೀ ಮಧುರ ಸ್ವರ ನುಡಿಯುವಿ
ಇದು ಹೇಗೆ ಕೊಳಲು"
ಕೊಳಲು ಹೇಳಿತು ನಕ್ಕು
"ನನ್ನ ಶರೀರದ ತೂತು 
ನನ್ನ ಜೀವನದ  ಗುರುತು
ಒಳಗಿನ ಖಾಲಿತನದಲ್ಲಿ
ಅಡಗಿದೆ ಒಂದು ಮಾತು
"ನಿಮ್ಮ ಒಳಗೆ ನಿಮಗೆ
ಕಾಣದ ಗುಣಗಳು ತುಂಬಿದೆ,  
ನಿರಾಶೆಯ ತೂತುಗಳನ್ನು
ಹಾಗು ಖಾಲಿತನವನ್ನು 
ದೈರ್ಯದಿಂದ ಹಾಗು
ಎಚ್ಚರಿಕೆಯಿಂದ ಮುಚ್ಚಿದರೆ,
ನಿಮ್ಮ ಎಲ್ಲ ಗುಣಗಳನ್ನು
ನನ್ನ ಮಧುರ ಸ್ವರಗಳಂತೆ
ಹೊರ ತರಬಹುದು"
by ಹರೀಶ್ ಶೆಟ್ಟಿ, ಶಿರ್ವ

ಮುದಿ ವಯಸ್ಸು

ಜೀವನ ಕಳೆಯಿತು
ಪ್ರಾಮಾಣಿಕತೆಯಿಂದ  ಜವಾಬ್ದಾರಿ ನಿಭಾಯಿಸುತ
ಮಕ್ಕಳಲ್ಲಿ ಪ್ರೀತಿ ಪ್ರೇಮ ಹಂಚುತ
ಅವರ ಅವಶ್ಯಕತೆಗಳನ್ನು ಪೂರೈಸುತ್ತ

ಮಗಳ ಮದುವೆ,
ಮಗನ ವಿಧ್ಯಾಬ್ಯಾಸ
ಅವನ ಮದುವೆ
ಎಲ್ಲವೂ ಸಂಭ್ರಮದೊಂದಿಗೆ ಜರುಗಿಸಿದೆ
ಅವರ ಹೊಸ ಜೀವನದ ಪ್ರಾರಂಭಕ್ಕೆ
ತನ್ನ ಆಸ್ತಿ ಐಶ್ವರ್ಯವನ್ನು  ಅವರಿಗೆ ಅರ್ಪಿಸಿದೆ

ಇನ್ನು ಸಂತೋಷ ಆನಂದದಿಂದ
ತನ್ನ ಬರುವ ಮೊಮ್ಮಕ್ಕಳ ಒಟ್ಟಿಗೆ ಆಡುತ
ನಾವಿಬ್ಬರು ಜೀವನ ಆರಾಮದಿಂದ ಕಳೆಯುವೆವು
ಎಂದು ಮನದಲ್ಲಿ ಖುಷಿ ಅಡಗಿತ್ತು
ಆದರೆ ಅವಳು ನಡು ಹಾದಿಯಲ್ಲಿ
ನನ್ನನ್ನು ಬಿಟ್ಟು ಮುಕ್ತಲಾದಳು

ಓಡಿತು ಸಮಯದ ಬಂಡಿ
ಮಗನ ಬೇರೆಯೇ ಜೀವನ
ಆಯಿತು ನನ್ನದ್ದು ಒಂಟಿ ಜೀವನ
ನಾನು ಆಗಿದೆ ಬೇಡವಾದ ವಸ್ತು
ಒಂದು ದಿನ ಮಗ ಹೇಳಿ ಬಿಟ್ಟ
ನೋಡಿ ನಿಮ್ಮ ರಸ್ತೆ
ನಾನು ಆದೆ  ಸುಸ್ತು

ಈ ಮುದಿ ವಯಸ್ಸಿನಲ್ಲಿ
ಎಲ್ಲಿಗೆ ಹೋಗಲಿ
ಬೇಡಿದೆ ನಾ
ಕೇಳಲಿಲ್ಲ ನನ್ನ
ಬಿಸಾಕಿ ಬಿಟ್ಟರು ಹೊರಗೆ ನನ್ನ


ಕೈ ಒಂದು ನನ್ನ ಬೆನ್ನ ಮೇಲೆ
ನನ್ನ ಒಬ್ಬ ಮುದಿ ಮಿತ್ರ
ಕಣ್ಣಿರು ಹರಿಯಿತು
ಒರೆಸಿದ ನನ್ನ ಕಣ್ಣಿರು
"ಬಾ ಗೆಳೆಯ ಒಟ್ಟಿಗೆ ಬಾಳೋಣ
ನಮ್ಮಂತ ಮುದಿ ವಯಸ್ಸಿನ
ಗೆಳೆಯರೊಂದಿಗೆ ಈ ಜೀವನ ಕಳೆಯೋಣ"
by .ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )


Kabir Doha (ಕಬೀರ ದೋಹ )

Keson Kaha Bigadia, Je Moonde Sau Baar
Man Ko Kahe Na Moondiye, Jaamein Vishey Vikaar
 

ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಕೂದಲು ಏನು ಮಾಡಿದೆ ಹಾನಿ , ನೂರು ಬಾರಿ ನೀ ಮುಂಡನೆ ಮಾಡುವೆ 
ಮನಸ್ಸಿನ ಮುಂಡನೆ ಏಕೆ ಮಾಡಬಾರದು , ಅದರಲ್ಲಿ ವಿಷಪೂರಿತ ಆಲೋಚನೆಗಳ ತುಂಬುವೆ 

Sunday, August 7, 2011

ಕೊಡೆಯ ಮಾಯೆ

ಕೇಳಿದೆ ನಾ ಕೊಡೆಯ
"ನೀನು ಇಷ್ಟು ಚಿಕ್ಕ
ಕೀರ್ತಿ ನಿನ್ನ ದೊಡ್ಡದು
ಮಳೆಯಿಂದ ರಕ್ಷಿಸುವೆ
ಬಿಸಿಲಲ್ಲಿ ನೀಡುವೆ ಛಾಯೆ
ಎಂಥ ನಿನ್ನ ಮಾಯೆ "
ಕೊಡೆ ಹೇಳಿತು ನಕ್ಕು
"ನನ್ನದಿಲ್ಲ ಏನು ಮಾಯೆ
ನನ್ನನ್ನು ಮಾಡಿದವ ಜಾಣ
ನಿಮಗೆ ಒಂದು ಜ್ಞಾನ
ಕಷ್ಟ ಇರಲಿ ಎಷ್ಟೇ ದೊಡ್ಡ
ಸಿಕ್ಕ ಚಿಕ್ಕ ಸಹಾಯವೇ  ಮುಖ್ಯ,
ದೊಡ್ಡ ಕಷ್ಟವನ್ನು 
ಪಾರು ಮಾಡುವುದು
ಚಿಕ್ಕ ಸಹಾಯದಿಂದಲೂ ಶಕ್ಯ" 
ಹರೀಶ್ ಶೆಟ್ಟಿ, ಶಿರ್ವ

ಸತ್ತ ನಂತರ

ಅವನು ಸತ್ತಿದ್ದ
ಬೀದಿಯಲ್ಲಿ ಬಿದ್ದಿದ್ದ

ಜನರು ನೋಡಿ ನೋಡಿ ಹೋಗುತ್ತಿದ್ದರು
ತರಹ ತರಹದ ನೋಟಗಳು
ಆಶ್ಚರ್ಯದ, ಭಯದ,ದಯೆಯ,
ವ್ಯಂಗದ, ಕೋಪದ,

ಇವನ ಯಾರೂ ಇಲ್ಲವೇ ?
ಇವನ ತಂದೆ ತಾಯಿ ?
ಇವನ ಮದುವೆ ಆಗಿದೆಯೇ ?
ಇವನ ಮಡದಿ, ಮಕ್ಕಳು?
ಇವನಿಗಾಗಿ ಅಳುವವರು ಇದ್ದರೆಯೇ ?

ಸೂರ್ಯ ಮುಳುಗಿತು
ಕತ್ತಲೆ ಕವಿಯಿತು
ಅವ ಅಲ್ಲೇ ಬಿದ್ದಿದ್ದ
ಎಲ್ಲರೂ ನೋಡಿ ನೋಡಿ ಹೋದರು
ಯಾರಲ್ಲಿಯೂ ಸಮಯವಿಲ್ಲ
ಅವನ ಯಾರೂ ಇಲ್ಲ

ಮಳೆ ಸುರಿಯಲಾರಂಬಿಸಿತು
ಅವ ಅಲ್ಲೇ ಬಿದಿದ್ದ
ಚಂಡಿ ಪುಂಡಿ
ನಾಯಿ ಒಂದು ಬೊಗಳುತಿತ್ತು
ಅವನ ಸುತ್ತ ಸುತ್ತ ತಿರುಗುತಿತ್ತು

ಅವನು ಸತ್ತಿದ್ದ
ಬೀದಿಯಲ್ಲಿ ಬಿದ್ದಿದ್ದ
by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

Kabir Doha (ಕಬೀರ ದೋಹ )

Maala Pherat Jug Bhaya, Mita Na Man Ka Pher
Kar Ka Manka Chhor De, Man Ka Manka  Pher

ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಯುಗ ಕಳೆಯಿತು ಮಣಿಮಾಲೆಯ ತಿರುಗಿಸುತ,  ಅಳಿಸಲಾಗಲಿಲ್ಲ ಹಂಬಲ ಮನಸ್ಸಿನ ...
ಮಣಿಮಾಲೆಯನ್ನು ಬಿಟ್ಟು ಬಿಡು,  ತಿರುಗಿಸು ಮಣಿ ಮನಸ್ಸಿನ....

Saturday, August 6, 2011

ದೀಪದ ಸಂದೇಶ

ಕೇಳಿದೆ ನಾ ದೀಪವ
"ಸ್ವತಃ ಕತ್ತಲೆ ಆವರಿಸಿ,
ತನ್ನನ್ನು ಉರಿಸಿ,
ಬೇರೆಯವರಿಗೆ ಬೆಳಕು ನೀಡುತಿ,
ಏಕೆ ನಿನಗೆ ಈ ಕಷ್ಟ ?"
ದೀಪ ಹೇಳಿತು ನಕ್ಕು
" ನನಗಿಲ್ಲ ಏನೂ ಕಷ್ಟ
ನನಗೆ ಇದೇ ಇಷ್ಟ
ನನ್ನಿಂದ ಸಂದೇಶ ಸ್ಪಷ್ಟ
ನೀವೂ ನನ್ನಂತೆ ಜೀವನ ಸಾಗಿಸಿ 
ನನ್ನಂತೆ  ಉರಿದು ಬೇರೆಯವರ ಬಾಳನ್ನು ಬೆಳಗಿಸಿ "
by ಹರೀಶ್ ಶೆಟ್ಟಿ, ಶಿರ್ವ

ಅಮ್ಮ


ಅವಳು ಗರ್ಭಿಣಿ
ಖುಷಿಯೇ ಖುಷಿ
ಮನದಲ್ಲಿ ಒಂದು ಮಧುರ ಭಾವನೆ

ಆಗುತಿತ್ತು ಅಪಾರ ಕಷ್ಟ
ಆದರೆ ಅದರಲ್ಲೂ ಇಷ್ಟ
ಒಂದು ಸಿಹಿ ಅನುಭವ

ತಿಂಗಳು ತುಂಬಿತು
ಸಮಯ ಬಂತು
ಪ್ರಸವದ  ವೇದನೆ 
ಅಮೋಘ ಸಾಧನೆ
ಬಂತು ಆ ಕ್ಷಣ
ಭೂಮಿಗೆ ಕಾಲಿಟ್ಟ ಹೊಸ ಜನ

ಮಿನುಗುತಿತ್ತು ಅವಳ ಕಣ್ಣು
ತುಟಿಯಲ್ಲಿ ಶಾಂತಿಯ ನಗು
ಮುಖದಲ್ಲಿ ಹೆಮ್ಮೆ , ಸಂತೋಷ,
ಸಮಾಧಾನದ  ಭಾವ 

ಅವಳು ಈಗ ತಾಯಿ
"ಅಮ್ಮ " ಎಂಬ ಬಿರುದು
ಸಿಕ್ಕಿತು ಅವಳಿಗೆ
ಬಹುಮೂಲ್ಯ ಉಡುಗೊರೆ
ಅವಳ ಬಾಳಿಗೆ
by ಹರೀಶ್ ಶೆಟ್ಟಿ , ಶಿರ್ವ 

Kabir Doha (ಕಬೀರ ದೋಹ )

Kabir Doha

Maala To Kar Mein Phire, Jeebh Phire Mukh Mahin
Manua To Chahun Dish Phire, Yeh To Simran Nahin

ಅನುವಾದ : ಹರೀಶ್  ಶೆಟ್ಟಿ , ಶಿರ್ವ

ಮಣಿಮಾಲೆಯು ಕೈಯಲ್ಲಿ ತಿರುಗುವುದು, ನಾಲಿಗೆ ತಿರುಗುವುದು ಬಾಯಲ್ಲಿ
ಮನಸ್ಸು ಅಲೆಯುವುದು ಎಲ್ಲ ದಿಶೆಯಲ್ಲಿ,  ಧ್ಯಾನ ಆಗುವುದು ಎಲ್ಲಿ

Friday, August 5, 2011

ಬಡವನ ಸಮಸ್ಯೆ

ಬಡವನಿಗೆ ಕೇಳಿದೆ ನಾ
"ಏನು ನಿನ್ನ ಸಮಸ್ಯೆ
ಏಕೆ ನೀ ಹೀಗೆ ?"

ಬಡವ ಹೇಳಿದ ನಕ್ಕು
"ನನ್ನದೇನು ಸಮಸ್ಯೆ
ನಾನೇ ಒಂದು ಸಮಸ್ಯೆ
ನಾನು ಹೇಳಿದು ಆಗುವುದು
ಅರ್ಥ ಅಲ್ಪ
ಬೇಕಾಗಿದ್ದದ್ದು ಮಾತ್ರ
ಅನ್ನ ಸ್ವಲ್ಪ"
by ಹರೀಶ್ ಶೆಟ್ಟಿ, ಶಿರ್ವ

ಚೆಂದ ನೀ ಚೆಂದ ನಾ ಚೆಂದ


ಚೆಂದ  ನೀ ಚೆಂದ  ನಾ ಚೆಂದ
ಎಲ್ಲವೂ ಚೆಂದ

ಮನಸ್ಸು ಚೆಂದ
ಕನಸು ಚೆಂದ
ಹೃದಯ ಚೆಂದ
ಕಂಠ ಚೆಂದ
ಮಾತು ಚೆಂದ
ಈ ದೇಹವೇ ಚೆಂದ

ಚೆಂದ  ನೀ ಚೆಂದ  ನಾ ಚೆಂದ
ಎಲ್ಲವೂ ಚೆಂದ

ಹಗಲು ಚೆಂದ
ಇರುಳು ಚೆಂದ
ನೆರಳು ಚೆಂದ
ಬಿಸಿಲು ಚೆಂದ
ಮಳೆಯು ಚೆಂದ
ಈ ವಾತಾವರಣವೇ ಚೆಂದ

ಚೆಂದ  ನೀ ಚೆಂದ  ನಾ ಚೆಂದ
ಎಲ್ಲವೂ ಚೆಂದ

ಸೂರ್ಯ ಚೆಂದ
ಚಂದ್ರ ಚೆಂದ
ನಕ್ಷತ್ರ ಚೆಂದ
ಮೋಡ ಚೆಂದ
ಮಿಂಚು ಚೆಂದ
ಈ ಆಕಾಶವೇ ಚೆಂದ

ಚೆಂದ ನೀ ಚೆಂದ  ನಾ ಚೆಂದ
ಎಲ್ಲವೂ ಚೆಂದ

ಭೂಮಿ ಚೆಂದ
ಸೃಷ್ಟಿ ಚೆಂದ
ಗಾಳಿ ಚೆಂದ
ನದಿಯು  ಚೆಂದ
ಸಮುದ್ರ ಚೆಂದ
ಈ ನಿಸರ್ಗವೇ ಚೆಂದ

ಚೆಂದ  ನೀ ಚೆಂದ  ನಾ ಚೆಂದ
ಎಲ್ಲವೂ ಚೆಂದ

ಪ್ರಾಣಿ ಚೆಂದ
ಪಕ್ಷಿ ಚೆಂದ
ಕ್ರಿಮಿ ಚೆಂದ
ಕೀಟ ಚೆಂದ
ಮಾನವನು  ಚೆಂದ
ಈ ಕಾಡು ಪ್ರಪಂಚವೇ ಚೆಂದ

ಚೆಂದ  ನೀ ಚೆಂದ  ನಾ ಚೆಂದ
ಎಲ್ಲವೂ ಚೆಂದ

ಹಣ್ಣು ಚೆಂದ
ಹೂವು ಚೆಂದ
ಬಳ್ಳಿ ಚೆಂದ
ಗಿಡವು  ಚೆಂದ
ಮರವು   ಚೆಂದ
ಈ ಭೂಮಿಯೇ ಚೆಂದ

ಚೆಂದ ನೀ ಚೆಂದ ನಾ ಚೆಂದ
ಎಲ್ಲವೂ ಚೆಂದ

ಮಿತ್ರ ಚೆಂದ
ಶತ್ರು ಚೆಂದ
ಅಣ್ಣ ಚೆಂದ
ತಮ್ಮ ಚೆಂದ
ಸಂಬಂಧ ಚೆಂದ
ಈ ಸಂಸಾರವೇ ಚೆಂದ

ಚೆಂದ  ನೀ ಚೆಂದ  ನಾ ಚೆಂದ
ಎಲ್ಲ ವೂ ಚೆಂದ

by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

Kabir Doha
Kabir Yeh Ghar Prem Ka, Khala Ka Ghar Nahin
Sees Utaare Hath Kar, So Pasey Ghar Mahin
ಅನುವಾದ: ಹರೀಶ್ ಶೆಟ್ಟಿ, ಶಿರ್ವ
ಕಬೀರ ಈ ಮನೆ ಪ್ರೇಮದ , ಚಿಕ್ಕಮ್ಮನ ಮನೆ ಅಲ್ಲ
ಹೆಮ್ಮೆಯ ತ್ಯಜಿಸುವವನು ಮಾತ್ರ, ಇಲ್ಲಿ ನೆಲೆಸಬಲ್ಲ

Thursday, August 4, 2011

ಕೋಗಿಲೆಯ ರೂಪ

ಕೇಳಿದೆ ನಾ ಕೋಗಿಲೆಯ
"ಎಂಥ ಸುಮಧುರ ಕಂಠ ನಿನಗೆ
ಆದರೆ ನಿನ್ನ ರೂಪ ಏಕೆ ಹೀಗೆ?
ಕೋಗಿಲೆ ಹೇಳಿತು ನಕ್ಕು ..
"ನನ್ನ ಕಂಠ ದೇವರು ನೀಡಿದ ವರದಾನ
ಕೇಳಿ ಈ ನನ್ನ ಮಧುರ ಗಾನ
ಅರಿಯುವಿ ನೀ ಜೀವನ ಜ್ಞಾನ
ಸೌಂದರ್ಯ,ರೂಪಕ್ಕೆ ಇಲ್ಲ ಮಾನ
ಗುಣ ನಡತೆಯೇ ಮಹಾನ"
by ಹರೀಶ್ ಶೆಟ್ಟಿ, ಶಿರ್ವ

ಏಕೆ ಈ ಭಾಷೆಯ ಬಂಧನ

ಏಕೆ ಈ ಭಾಷೆಯ ಬಂಧನ
ಎಲ್ಲ ಭಾಷೆಯು ಚಂದನ 
ಮಾಡ ಬೇಡಿ ಕದನ

ಭಾಷೆ ಇದೆಯೇ ನಗುವಿಗೆ ?
ಭಾಷೆ ಇದೆಯೇ ರುದನಕ್ಕೆ?
ಭಾಷೆ ಇದೆಯೇ  ಮೂಕನಿಗೆ?
ಭಾಷೆ ಇದೆಯೇ  ಕಿವುಡನಿಗೆ ?
ಭಾಷೆ ಇದೆಯೇ ಮಗುವಿಗೆ ?

ಏಕೆ ಈ ಭಾಷೆಯ ಬಂಧನ
ಎಲ್ಲ ಭಾಷೆಯು ಚಂದನ 
ಮಾಡ ಬೇಡಿ ಕದನ

ಮೂರ್ಖನ ಭಾಷೆ ತಿಳಿಯಲು ಕಷ್ಟ
ಜ್ಞಾನಿಯ ಭಾಷೆ ತಿಳಿಯಲು ಕಷ್ಟ
ಅಜ್ಞಾನಿಯ ಭಾಷೆ ತಿಳಿಯಲು ಕಷ್ಟ
ಅಧರ್ಮಿಯ ಭಾಷೆ ತಿಳಿಯಲು ಕಷ್ಟ
ಧರ್ಮೀಯ ಭಾಷೆ ತಿಳಿಯಲು ಕಷ್ಟ 

ಏಕೆ ಈ ಭಾಷೆಯ ಬಂಧನ
ಎಲ್ಲ ಭಾಷೆಯು ಚಂದನ 
ಮಾಡ ಬೇಡಿ ಕದನ

ಇರುವುದು ಒಂದೇ ಮೂಲ ಭಾಷೆ
ಅದರಿಂದ ಹುಟ್ಟಿದೆ ಎಲ್ಲ ಭಾಷೆ
ಅಣ್ಣ ತಮ್ಮಂದಿರು ಎಲ್ಲ ಭಾಷೆ
ತಾಯಿ ನುಡಿಗೆ ಏಕೆ  ಭಾಷೆ
ತಂದೆಯ ಪ್ರೀತಿಗೆ ಬೇಕೇ ಭಾಷೆ ?


ನಿಮಗೆ ನಿಮ್ಮ ಭಾಷೆಯ ಸ್ಪಂದನ
ಅವರಿಗೆ ಅವರ ಭಾಷೆಯ ಸ್ಪಂದನ
ಏಕೆ ಈ ಭಾಷೆಯ ಬಂಧನ
ಎಲ್ಲ ಭಾಷೆಯು ಚಂದನ 
ಮಾಡ ಬೇಡಿ ಕದನ

ಮಗುವಿಗೆ ಅರ್ಥವಾಗುವುದು ಕೇವಲ ಅಮ್ಮಳ ಭಾಷೆ
ರೈತನಿಗೆ ಅರ್ಥವಾಗುವುದು ಕೇವಲ ಮಣ್ಣಿನ ಭಾಷೆ
ಮೂಕ ಕಿವುಡರಿಗೆ  ಅರ್ಥವಾಗುವುದು ಕೇವಲ ಕೈ ಸನ್ನೆಯ ಭಾಷೆ
ಮೂರ್ಖರಿಗೆ ಅರ್ಥವಾಗುವುದು ಕೇವಲ ಅವರದ್ದೇ ಭಾಷೆ
ಬುದ್ದಿವಂತರಿಗೆ ಅರ್ಥವಾಗುವುದು ಕೇವಲ ಜ್ಞಾನದ ಭಾಷೆ
ಏಕೆ ಈ ಭಾಷೆಯ ಬಂಧನ
ಎಲ್ಲ ಭಾಷೆಯು ಚಂದನ
ಮಾಡ ಬೇಡಿ ಕದನ 
by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

Kabir Doha

Ek Kahun To Hai Nahin, Do Kahun To Gaari
Hai Jaisa Taisa Rahe, Kahe Kabir Bichari 

ಅನುವಾದ : ಹರೀಶ್ ಶೆಟ್ಟಿ, ಶಿರ್ವ

ನಾನು ಒಂದು ಹೇಳಿದರೆ ಇದು ಅಲ್ಲ,  ಎರಡು ಹೇಳಿದರೆ ಉಲ್ಲಂಘನೆ..
ಇರಲಿ ಹೇಗೆ ಇದೆಯೋ , ಹೇಳುತ್ತಾರೆ ಕಬೀರ ಮಾಡುತ ಚಿಂತನೆ.....

Wednesday, August 3, 2011

ತಾವರೆಯ ಗುಣ

ಕೇಳಿದೆ ನಾ  ತಾವರೆಯ  ಹೂವಿಗೆ ,
"ಎಂಥ ನಿನ್ನ ಅಂದ ,
ಎಂಥ ನಿನ್ನ ಚೆಂದ ,
ಆದರೆ ಇರುವುದು
ಏಕೆ ನೀ ಈ ಕೆಸರಲ್ಲಿ
ಏಕೆ  ನಿನಗೆ ಇದು ಅನುಬಂಧ ?"
ತಾವರೆ ಹೂ ಹೇಳಿತು ನಕ್ಕು
" ನನ್ನ ಅಂದ ಚೆಂದ
ಅಲ್ಲ ನನ್ನ ಗುಣ,
ಕೆಸರಿನಲ್ಲಿದ್ದರು
ನನ್ನಲ್ಲಿ ಇಲ್ಲ ಅವಗುಣ
ಬಾಳುವೆ ನಾ ಇಲ್ಲಿ ಸುಖದಿಂದ
"ಕಷ್ಟದಲ್ಲೂ ಸುಖದಿಂದ ಇರಬಹುದು
ಕೊಳಕಲ್ಲೂ  ಸೌಂದರ್ಯ ಹುಟ್ಟಬಹುದು"
ಇದೇ ಸಂದೇಶ ನಿಮೆಗೆಲ್ಲರಿಗೂ ನನ್ನಿಂದ .
by ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...